ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗೆ ಕುಸಿದು ಬಿದ್ದ ಸೇತುವೆ

Last Updated 10 ಅಕ್ಟೋಬರ್ 2017, 6:06 IST
ಅಕ್ಷರ ಗಾತ್ರ

ಶಿರಹಟ್ಟಿ: ಕಳೆದ ವಾರ ಸುರಿದ ಭಾರಿ ಮಳೆಗೆ ತಾಲ್ಲೂಕಿನ ಮಾಡಳ್ಳಿ ಗ್ರಾಮದ ಹೊರವಲಯದ ಸೇತುವೆ ಕುಸಿದು ಬಿದ್ದಿದೆ. ಮಾಡಳ್ಳಿ ಗ್ರಾಮದಿಂದ ಬರದ್ವಾಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು, ಸೇತುವೆ ಕುಸಿದಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ.

ವಿದ್ಯಾರ್ಥಿಗಳು ಸೇರಿ ನಿತ್ಯ ಈ ಮಾರ್ಗವಾಗಿ ನೂರಾರು ಜನ ಸಂಚರಿಸುತ್ತಿದ್ದು, ತೊಂದರೆ ಸಿಲುಕಿದ್ದಾರೆ.ಸೇತುವೆ ಕುಸಿದ ಸ್ಥಳದಲ್ಲಿ ದೊಡ್ಡ ಕಂದಕವೇ ಸೃಷ್ಟಿಯಾಗಿದೆ. ಮಾಡಳ್ಳಿ ಮುಖಾಂತರ ಲಕ್ಷ್ಮೇಶ್ವರ, ಶಿರಹಟ್ಟಿ ಹಾಗೂ ಗದಗ ನಗರಕ್ಕೆ ಸಂಚರಿಸುವ ವಾಹನಗಳಿಗೂ ಅಡಚಣೆಯಾಗಿದೆ.

ಮಾಡಳ್ಳಿ ಗ್ರಾಮದಿಂದ ಕೋಳಿವಾಡ ಗ್ರಾಮಕ್ಕೆ ಸಂಚರಿಸುವ ಮಾರ್ಗಮದ್ಯದಲ್ಲಿ ₹2 ಕೋಟಿ ವೆಚ್ಚದಲ್ಲಿ ನಾಲ್ಕು ಸಿಮೆಂಟ್‌ ಕಂಬಗಳನ್ನು ನಿರ್ಮಿಸಲಾಗಿದ್ದು, ಅವೂ ಸಹ ಮಳೆಗೆ ಹಾನಿಗೊಂಡಿವೆ. ಕಳಪೆ ಕಾಮಗಾರಿಯೇ ಇದಕ್ಕೆ ಕಾರಣ ಎಂದು ಆರೋಪಿಸಿರುವ ಗ್ರಾಮಸ್ಥರು, ಸೇತುವೆಯನ್ನು ತಕ್ಷಣ ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT