ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

24ಗಂಟೆ ಆನ್‌ಲೈನ್‌ನಲ್ಲಿ ಗೇಮ್ ಆಡಿ ಕಣ್ಣು ಕಳೆದುಕೊಂಡ ಯುವತಿ!

Last Updated 10 ಅಕ್ಟೋಬರ್ 2017, 12:55 IST
ಅಕ್ಷರ ಗಾತ್ರ

ಬೀಜಿಂಗ್‌ : ಸತತ 24 ಗಂಟೆ ಆನ್‌ಲೈನ್‌ ಆಟವಾಡಿ ಚೀನಾದ ಶಾಂಕ್ಸಿ ಪ್ರಾಂತ್ಯದ 21 ವರ್ಷ ವಯಸ್ಸಿನ ಯುವತಿಯೊಬ್ಬಳು ಒಂದು ಕಣ್ಣನ್ನು ಕಳೆದುಕೊಂಡಿದ್ದಾಳೆ.

‘ಖಾಸಗಿ ಕಂಪೆನಿಯೊಂದರ ಉದ್ಯೋಗಿಯಾಗಿರುವ ಯುವತಿಗೆ ಆನ್‌ಲೈನ್‌ ಆಟದ ಹುಚ್ಚು. ಪ್ರತಿದಿನವೂ ಕಚೇರಿಯ ಕೆಲಸ ಮುಗಿದ ಮೇಲೆ ಈಕೆ ‘ಆನರ್‌ ಆಫ್‌ ಕಿಂಗ್ಸ್‌’ ಎಂಬ ಆಟ ಆಡುತ್ತಿದ್ದಳು. ಒಂದು ದಿನ ಕಚೇರಿಗೆ ರಜೆ ಇದ್ದುದರಿಂದ ದಿನಪೂರ್ತಿ ಆಟವಾಡಿದ್ದಾಳೆ.

ಆಗ ಇದ್ದಕ್ಕಿದ್ದಂತೆಯೇ ಬಲಗಣ್ಣು ಮಂಜಾಗಲು ಶುರುವಾಗಿದೆ.ಆಕೆಯ ಪೋಷಕರು  ಆಸ್ಪತ್ರೆಗೆ ದಾಖಲಿಸಿದ್ದರು. ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ  ಪ್ರಯೋಜನ ಆಗಲಿಲ್ಲ. ರೆಟಿನಾಗೆ ಬಲವಾದ ಏಟು ಬಿದ್ದ ಕಾರಣ ಕಣ್ಣಿನ ದೃಷ್ಟಿ ಹೋಗಿರುವುದಾಗಿ ವೈದ್ಯರು ಹೇಳಿದ್ದಾರೆ’ ಎಂದು ‘ಸೌತ್‌ ಚೈನಾ ಮಾರ್ನಿಂಗ್‌ ಪೋಸ್ಟ್‌’ ಪತ್ರಿಕೆ ವರದಿ ಮಾಡಿದೆ.

‘ನನಗೆ ವೇಳೆ ಇದ್ದಾಗಲೆಲ್ಲಾ ಆಟವಾಡುತ್ತಿದ್ದೆ. ಬೆಳಿಗ್ಗೆ 6ಗಂಟೆಗೆ ಎದ್ದು ಆಟ ಶುರು ಮಾಡಿದರೆ ಮಧ್ಯಾಹ್ನ ಊಟದ ಸಮಯದವರೆಗೂ ಆಟ ಮುಂದುವರಿಸುತ್ತಿದ್ದೆ. ಆದರೆ ಆ ದಿನ ಊಟ ಮಾಡಲೂ ಮರೆತಿದ್ದೆ’ ಎಂದು ಯುವತಿ ಹೇಳಿಕೆ ಕೊಟ್ಟಿದ್ದಾಳೆ. ‘ಆನರ್‌ ಆಫ್‌ ಕಿಂಗ್ಸ್‌ ಚೀನಾದ ಪ್ರಸಿದ್ಧ ಆನ್‌ಲೈನ್‌ ಆಟವಾಗಿದ್ದು, ಈ ಆಟಕ್ಕೆ 20ಲಕ್ಷಕ್ಕೂ ಅಧಿಕ ಮಂದಿ ಚಂದಾದಾರರಾಗಿದ್ದಾರೆ’ ಎಂದು ಪತ್ರಿಕೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT