ಲಾರಿ ಮಾಲೀಕರ ಮುಷ್ಕರ ಅಂತ್ಯ

ಶುಕ್ರವಾರ, ಮೇ 24, 2019
29 °C

ಲಾರಿ ಮಾಲೀಕರ ಮುಷ್ಕರ ಅಂತ್ಯ

Published:
Updated:
ಲಾರಿ ಮಾಲೀಕರ ಮುಷ್ಕರ ಅಂತ್ಯ

ಬೆಂಗಳೂರು: ‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ಡೀಸೆಲ್ ತರಬೇಕು’ ಎಂದು ಒತ್ತಾಯಿಸಿ ಲಾರಿ ಮಾಲೀಕರು ಹಾಗೂ ಚಾಲಕರು ಸೋಮವಾರದಿಂದ ನಡೆಸುತ್ತಿದ್ದ ಮುಷ್ಕರ ಮಂಗಳವಾರ ಅಂತ್ಯಗೊಂಡಿದೆ.

ರಾಜ್ಯದ ಹೆದ್ದಾರಿಗಳಲ್ಲಿ ಸಾಲುಗಟ್ಟಿ ನಿಂತಿದ್ದ ಬಹುತೇಕ ಲಾರಿಗಳು ಮಂಗಳವಾರ ಮಧ್ಯಾಹ್ನದಿಂದಲೇ ಸಂಚಾರ ನಡೆಸಿವೆ. ಡೀಸೆಲ್ ಮಾರಾಟದ ಮೇಲೆ ಮುಷ್ಕರದ ಪರಿಣಾಮ ಬೀರಿದೆ. ಎರಡು ದಿನಗಳಿಂದ ಮಾರಾಟ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಸರ್ಕಾರಕ್ಕೆ ಅಂದಾಜು ₹ 6 ಕೋಟಿ ನಷ್ಟ ಉಂಟಾಗಿದೆ.

ರಾಷ್ಟ್ರೀಯ ಹೆದ್ದಾರಿ ಹಾಗೂ ಹಲವೆಡೆ ನಿಂತಿದ್ದ ಲಾರಿಗಳು, ಮಂಗಳವಾರ ಮಧ್ಯಾಹ್ನದಿಂದಲೇ ಸಂಚಾರ ಆರಂಭಿಸಿವೆ. ರಾಜ್ಯದ ಗಡಿಯಲ್ಲೇ ನಿಂತಿದ್ದ ಲಾರಿಗಳು ಸಹ ಬೆಂಗಳೂರಿಗೆ ಬಂದಿವೆ. ಕೃಷಿ ಉತ್ಪನ್ನಗಳನ್ನು ಹೊತ್ತು ನಗರದ ಹೊರವಲಯದಲ್ಲಿ ನಿಂತಿದ್ದ ಕೆಲ ಲಾರಿಗಳು ಸಂಜೆ ವೇಳೆಗೆ ಯಶವಂತಪುರ ಎಪಿಎಂಸಿ ಮಾರುಕಟ್ಟೆ ನಿಂತಿದ್ದವು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry