ಒತ್ತಡ ನಿವಾರಣೆಗೆ ಓದುವುದೇ ದಾರಿ...

ಮಂಗಳವಾರ, ಜೂನ್ 18, 2019
24 °C

ಒತ್ತಡ ನಿವಾರಣೆಗೆ ಓದುವುದೇ ದಾರಿ...

Published:
Updated:
ಒತ್ತಡ ನಿವಾರಣೆಗೆ ಓದುವುದೇ ದಾರಿ...

ಒತ್ತಡ ನಮ್ಮೊಳಗೆ ಇರುತ್ತದೆ. ನಮಗೆ ಯಾವುದೋ ಒಂದು ಸಿಗಬೇಕು ಎಂದುಕೊಂಡು ಅದು ಸಿಗದೇ ಇದ್ದಾಗ, ಹೋ ಇದು ನಂಗೆ ಯಾಕೆ ಸಿಕ್ಕಿಲ್ಲ ಎಂಬ ಒತ್ತಡ ಶುರುವಾಗುತ್ತದೆ. ಅದನ್ನು ದಕ್ಕಿಸಿಕೊಳ್ಳಲು, ‘ಹೀಗೆ ಮಾಡಿದ್ರೆ ಹಾಗೆ ಆಗುತ್ತೆ, ಹಾಗೇ ಮಾಡಿದ್ರೆ ಹೀಗೆ ಆಗುತ್ತೆ’ ಅಂತೆಲ್ಲಾ ಲೆಕ್ಕಾಚಾರವನ್ನು ಹಾಕಿಕೊಂಡು ನಾವೇ ನಮ್ಮೊಳಗೆ ಒತ್ತಡವನ್ನು ತಂದುಕೊಳ್ಳುತ್ತೇವೆ.

ಒಬ್ಬ ಸಂಗೀತ-ನಿರ್ದೇಶಕನಾಗಿ ನನಗೆ ತುಂಬಾನೇ ಒತ್ತಡವಿದೆ. ಬೇರೆ ಬೇರೆ ಭಾಷೆಗಳ ಸಂಗೀತದ ನಡುವೆ ನಮ್ಮ ಕನ್ನಡತನವನ್ನು ಉಳಿಸಿಕೊಂಡು ಹೋಗುವುದು ನಿಜಕ್ಕೂ ನನಗೆ ಒತ್ತಡ ಎನ್ನಿಸುತ್ತದೆ. ನಾನು ಯಾವಾಗಲೂ ಸಂಗೀತದಲ್ಲಿ ಕನ್ನಡದ ಸ್ವಂತಿಕೆಯನ್ನು ಉಳಿಸಿಕೊಂಡು ಹೋಗಲು ಪ್ರಯತ್ನಿಸುತ್ತೇನೆ. ಅದೇ ಒಂದು ದೊಡ್ಡ ಚಾಲೆಂಜ್.

ಒಂಟಿಯಾಗಿದ್ದಾಗ ಮನಸ್ಸಿನಲ್ಲಿ ಸಾವಿರ ಯೋಚನೆಗಳು ಹುಟ್ಟಿಕೊಂಡು ನಮ್ಮನ್ನು ಒತ್ತಡಕ್ಕೆ ನೂಕುತ್ತವೆ. ನಮ್ಮ ಸುತ್ತಮುತ್ತ ಎಂದು ಒಳ್ಳೆಯ ವಾತಾವರಣವನ್ನು ಸೃಷ್ಟಿಸಿಕೊಳ್ಳಬೇಕು. ನಮ್ಮ ಜೊತೆ ಇರುವವರ ವ್ಯಕ್ತಿತ್ವವೂ ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಯಾರೋ ಒಬ್ಬರು ನಮ್ಮನ್ನು ಧೈರ್ಯಗೆಡಿಸುತ್ತಾರೆಂದರೆ ಅವರ ಬಳಿ ನಾವು ಹೋಗಬಾರದು. ಅವರನ್ನು ನಮ್ಮ ಬಳಿ ಬಿಟ್ಟುಕೊಳ್ಳಬಾರದು. ನಮ್ಮ ಜೊತೆ ಇರುವವರಲ್ಲಿ ಧನಾತ್ಮಕ ಯೋಚನೆ ಇದ್ದರೆ ನಾವು ಧನಾತ್ಮಕವಾಗಿರಲು ಸಾಧ್ಯ, ಧನಾತ್ಮಕತೆ ಎಂದಿಗೂ ನಮ್ಮಲ್ಲಿ ಒತ್ತಡವನ್ನು ಕಡಿಮೆ ಮಾಡುತ್ತದೆ.

ಸಂಗೀತ-ನಿರ್ದೇಶಕರಿಗೆ ತುಂಬಾ ಒತ್ತಡವಿದೆ. ಅದರಲ್ಲೂ ಸಿನಿಮಾಗಳಿಗೆ ಸಂಗೀತ-ನಿರ್ದೇಶನ ಮಾಡುವವರಿಗೆ ಒತ್ತಡ ಒಂದು ಹಿಡಿ ಹೆಚ್ಚೇ ಎನ್ನಬಹುದು. ನಮಗೆ ವೃತ್ತಿಯಲ್ಲಿ ಅನಿಶ್ಚಿತತೆ ಇರುತ್ತದೆ. ಒಂದು ತಿಂಗಳು ಪೂರ್ತಿ ಒಂದು ಸಿನಿಮಾಕ್ಕೆ ಕೆಲಸ ಮಾಡಿ ಮುಂದಿನ ಮೂರು ತಿಂಗಳು ಕೆಲಸವಿಲ್ಲದೇ ಸುಮ್ಮನೆ ಕೂರುವ ಪರಿಸ್ಥಿತಿ ಎದುರಾಗುತ್ತದೆ. ಆಗ ನಮ್ಮ ಮೇಲೆ ಒತ್ತಡ ಹೆಚ್ಚಿರುತ್ತದೆ. ಜೀವನ, ಕುಟುಂಬದ ನಿರ್ವಹಣೆ – ನಮ್ಮ ಮೇಲೆ ಒತ್ತಡವನ್ನು ಹೇರುತ್ತದೆ. ನಮಗೆ ಮಾಡಲು ಬೇರೆ ಕೆಲಸಗಳು ಗೊತ್ತಿರುವುದಿಲ್ಲ. ಅದರಿಂದ ಹೊರ ಬರಬೇಕು ಅಂದರೆ ಮತ್ತೆ ಕೆಲಸವನ್ನು ಮಾಡಬೇಕು. ಆ ಸಮಯದಲ್ಲಿ ಚೆನ್ನಾಗಿ ಪ್ರಾಕ್ಟಿಸ್ ಮಾಡುತ್ತೇನೆ. ಒಳ್ಳೆಯ ಸ್ಫೂರ್ತಿದಾಯಕ ಪುಸ್ತಕಗಳನ್ನು ಓದುವ ಮೂಲಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುತ್ತೇನೆ.

ಇದು ಡಿಜಿಟಲ್ ಯುಗ, ಎಲ್ಲವೂ ಬೇಗ ಸಿಗಬೇಕು ಅನ್ನುವ ಮನೋಭಾವ ಇಂದಿನ ಜನರದ್ದು. ಬೇಗ ಸಿಗಬೇಕು ಎನ್ನುವುದೇ ಒಂದು ಒತ್ತಡ. ಅದಕ್ಕೆ ಬದಲಾಗಿ ಒಂದೊಂದೇ ಮೆಟ್ಟಿಲು ಹತ್ತಿ ನಮ್ಮ ಗುರಿ ಮುಟ್ಟಬೇಕು. ಒಮ್ಮಲೇ ಮೇಲೆ ಹೋಗಲು ಪ್ರಯತ್ನಿಸಿದರೆ ಬಿದ್ದುಬಿಡುತ್ತೇವೆ. ಇನ್ನು ತಂತ್ರಜ್ಞಾನ ಕೂಡ ಒತ್ತಡಕ್ಕೆ ಕಾರಣವಾಗುತ್ತದೆ. ಯಾಕೆಂದರೆ ತಂತ್ರಜ್ಞಾನವನ್ನು ಮಾಡಿದ್ದು ಮನುಷ್ಯ. ನಾವು ಹೇಗೆ ಹೇಳುತ್ತೇವೋ ತಂತ್ರಜ್ಞಾನ ಹಾಗೇ ಕೇಳಬೇಕು. ಆದರೆ ಈಗ ಅದು ಉಲ್ಟಾ ಆಗಿದೆ. ತಂತ್ರಜ್ಞಾನ ಹೇಳಿದ ಹಾಗೆ ನಾವು ಕೇಳುತ್ತಿದ್ದೇವೆ, ತಂತ್ರಜ್ಞಾನ ಇಂದು ಮನುಷ್ಯರನ್ನು ಮೀರಿ ನಿಂತಿದೆ. ತಂತ್ರಜ್ಞಾನದ ಅತಿ ಬಳಕೆ ಕೂಡ ಒತ್ತಡಕ್ಕೆ ಕಾರಣವಾಗಬಹುದು.

ಒತ್ತಡ ನಿಭಾಯಿಸಲು ಯೋಗ ಒಂದು ಉತ್ತಮ ಔಷಧ. ಯೋಗ ಮಾಡುವುದನ್ನು ರೂಢಿಸಿಕೊಂಡರೆ ಒತ್ತಡವನ್ನು ನಿವಾರಿಸಬಹುದು. ಜೊತೆಗೆ ಸಭ್ಯರ ಸಂಗ, ಉತ್ತಮ ಸಂಗೀತವನ್ನು ಕೇಳುವುದರಿಂದಲೂ ಒತ್ತಡವನ್ನು ನಿವಾರಿಸಲು ಸಾಧ್ಯ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry