ಭಾನುವಾರ, ಸೆಪ್ಟೆಂಬರ್ 22, 2019
22 °C

ತಾರತಮ್ಯ ಬೇಡ

Published:
Updated:

ಸಾರ್ವಜನಿಕ ಗ್ರಂಥಾಲಯ ಇಲಾಖೆ ಅಧೀನದ ರಾಜ್ಯದ ಗ್ರಂಥಾಲಯ ಮತ್ತು ವಾಚನಾಲಯಗಳಲ್ಲಿ ಸದಸ್ಯತ್ವಕ್ಕೆ ಗ್ರಾಮೀಣ ಪ್ರದೇಶಕ್ಕೆ ₹ 10 ಹಾಗೂ ನಗರ ಪ್ರದೇಶಕ್ಕೆ ₹ 100 ಶುಲ್ಕವಿದೆ. ಈ ತಾರತಮ್ಯ ಸರಿಯಲ್ಲ. ಓದುಗರ ಸಂಖ್ಯೆ ಮತ್ತು ಓದುವ ಅಭಿರುಚಿ ಹೆಚ್ಚಿಸುವ ದೃಷ್ಟಿಯಿಂದ ನಗರ ಪ್ರದೇಶಗಳಲ್ಲಿನ ಸದಸ್ವತ್ವ ಶುಲ್ಕವನ್ನು ಗರಿಷ್ಠ ₹ 20ಕ್ಕೆ ಮಿತಿಗೊಳಿಸಬೇಕು. ವಿದ್ಯಾರ್ಥಿಗಳಿಗಾಗಿ ವಿಶೇಷ ರಿಯಾಯಿತಿ ನೀಡಿದರೆ ಅದರ ಲಾಭ ಕನ್ನಡಕ್ಕೆ ಮತ್ತು ಕನ್ನಡ ಸಾಹಿತ್ಯಕ್ಕೆ ಸಿಗಬಹುದು. ಸಂಬಂಧಪಟ್ಟ ಇಲಾಖೆಯವರು ಗಮನ ಹರಿಸಬೇಕು.

–ದೇವಕಿಸುತ, ಬೆಂಗಳೂರು

Post Comments (+)