ಟ್ರಂಪ್ ಪತ್ನಿಯರ ಜಟಾಪಟಿ

ಬುಧವಾರ, ಜೂನ್ 19, 2019
32 °C

ಟ್ರಂಪ್ ಪತ್ನಿಯರ ಜಟಾಪಟಿ

Published:
Updated:
ಟ್ರಂಪ್ ಪತ್ನಿಯರ ಜಟಾಪಟಿ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊದಲ ಪತ್ನಿ ಇವಾನಾ ಅವರು ‘ಎಲ್ಲರ ಗಮನ ಸೆಳೆಯುವ ಬಾಯಿಬಡಕಿ’ ಎಂದು ಮೂರನೇ ಪತ್ನಿ ಮೆಲಾನಿಯಾ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಇವಾನಾ ಅವರು ತಮ್ಮ ‘ರೈಸಿಂಗ್ ಟ್ರಂಪ್’ ಪುಸ್ತಕ ಬಿಡುಗಡೆ ನಿಮಿತ್ತ ಎಬಿಸಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ‘ನಾನು ಅಮೆರಿಕದ ಮೊದಲ ಮಹಿಳೆ’ ಎಂದಿದ್ದರು. ತಮಾಷೆಗಾಗಿ ನೀಡಿದ್ದ ಈ ಹೇಳಿಕೆ ಮೆಲಾನಿಯಾ ಅವರಿಗೆ ಸಿಟ್ಟು ತರಿಸಿದೆ.

ಇವಾನಾ ಹೇಳಿದ್ದೇನು: ‘ಶ್ವೇತಭವನವನ್ನು ನೇರವಾಗಿ ಸಂಪರ್ಕಿಸುವ ಸಂಖ್ಯೆ ನನ್ನ ಬಳಿ ಇದೆ. ಆದರೆ ನಾನು ಅಲ್ಲಿಗೆ ಕರೆ ಮಾಡಲು ಇಚ್ಛಿಸುವುದಿಲ್ಲ. ಏಕೆಂದರೆ ಅಲ್ಲಿ ಮೆಲಾನಿಯಾ ಇದ್ದಾಳೆ. ಅಸೂಯೆ ಉಂಟು ಮಾಡಲು ನಾನು ಇಷ್ಟಪಡುವುದಿಲ್ಲ. ಏಕೆಂದರೆ ನಾನು ಟ್ರಂಪ್ ಅವರ ಮೊದಲ ಹೆಂಡತಿ ಅಲ್ಲವೇ? ನಾನು ಅಮೆರಿಕದ ಮೊದಲ ಮಹಿಳೆ. ಒಕೆ? (ನಗು..)’ – ಇದು ಇವಾನಾ ಅವರು ಸಂದರ್ಶನದಲ್ಲಿ ಹೇಳಿದ್ದ ಮಾತು.

ಮೆಲಾನಿಯಾ ತಿರುಗೇಟು: ಮೆಲಾನಿಯಾ ಪರವಾಗಿ ಅವರ ವಕ್ತಾರೆ ಗ್ರಿಶಮ್ ಅವರು ಪ್ರಕಟಣೆ ನೀಡಿದ್ದಾರೆ. ‘ಮೆಲಾನಿಯಾ ಅವರು ವಾಷಿಂಗ್ಟನ್‌ನಲ್ಲಿ ವಾಸಿಸಲು ಇಷ್ಟಪಡುತ್ತಾರೆ. ಅಮೆರಿಕದ ಮೊದಲ ಮಹಿಳೆ ಎಂಬ ಗೌರವವನ್ನೂ ಅವರು ಪಡೆದಿದ್ದಾರೆ. ತಮಗೆ ಸಿಕ್ಕ ಗೌರವವನ್ನು ಅವರು ಉತ್ತಮವಾಗಿ ಬಳಸಲು ಯೋಜಿಸುತ್ತಾರೆ ಮತ್ತು ಮಕ್ಕಳಿಗೆ ಸಹಾಯ ಮಾಡುತ್ತಾರೆ. ಆದರೆ ಪುಸ್ತಕ ಮಾರಾಟಕ್ಕಲ್ಲ’ ಎಂದು ಖಾರವಾಗಿ ತಿರುಗೇಟು ನೀಡಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry