‘ಬಾಲವನ ರಾಷ್ಟ್ರೀಯ ಸ್ಮಾರಕ ಆಗಲಿ’

ಬುಧವಾರ, ಜೂನ್ 26, 2019
25 °C

‘ಬಾಲವನ ರಾಷ್ಟ್ರೀಯ ಸ್ಮಾರಕ ಆಗಲಿ’

Published:
Updated:
‘ಬಾಲವನ ರಾಷ್ಟ್ರೀಯ ಸ್ಮಾರಕ ಆಗಲಿ’

ಪುತ್ತೂರು: ಸಾಹಿತ್ಯ ಲೋಕದ ‘ಶಬ್ದ ಬ್ರಹ್ಮ’ ಡಾ.ಶಿವರಾಮ ಕಾರಂತರ ಕರ್ಮಭೂಮಿಯಾಗಿದ್ದ ಪುತ್ತೂರು ಬಾಲವನವನ್ನು, ಕವಿ ಗೋವಿಂದ ಪೈ, ಕುವೆಂಪು ಸ್ಮಾರಕಗಳಂತೆ ರಾಷ್ಟ್ರೀಯ ಸ್ಮಾರಕವಾಗಿ ಅಭಿವೃದ್ಧಿಪಡಿಸುವ ಮೂಲಕ ಕಾರಂತರಿಗೆ ಗೌರವ ಅರ್ಪಣೆ ಮಾಡುವ ಕೆಲಸ ನಡೆಯಬೇಕು ಎಂದು ಸಂಸದ ವೀರಪ್ಪ ಮೊಯಿಲಿ ಹೇಳಿದರು.

ಪುತ್ತೂರಿನ ಪರ್ಲಡ್ಕದಲ್ಲಿರುವ ಬಾಲವನದಲ್ಲಿ ಮಂಗಳವಾರ ಡಾ.ಶಿವರಾಮ ಕಾರಂತರ 115ನೇ ಜನ್ಮದಿನಾಚರಣೆ ಕಾರ್ಯಕ್ರಮ, ಪುನಶ್ಚೇತನ

ಗೊಂಡ ಕಾರಂತರ ಮನೆ, ಮ್ಯೂಸಿಯಂ ಹಾಗೂ ಗ್ರಂಥಾಲಯ ಕೊಠಡಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬಾಲವನ ಕಾರಂತರ ತಪೋವನ. ಯಕ್ಷಗಾನವನ್ನು ಬ್ಯಾಲೆಯನ್ನು ವರ್ತಮಾನದ ಬೆಳಕಿನಲ್ಲಿ ಜಗತ್ತಿಗೆ ನೀಡಿದ ಈ ಬಾಲವನದಲ್ಲಿ, ಯಕ್ಷಗಾನ ಸಂಶೋಧನಾ ಕೇಂದ್ರ ನಿರ್ಮಾಣವಾಗಬೇಕು. ಕಾರಂತರಿಂದ ಬಾಲವನದಲ್ಲಿ ಸುಮಾರು 40 ಕೃತಿಗಳು ಹುಟ್ಟು ಪಡೆದಿವೆ. ಕಾರಂತರ ಕಾದಂಬರಿಗಳು ಸತ್ಯದ ಶಿಲಾಶಾಸನಗಳಾಗಿದ್ದು, ಗದ್ಯ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ’ ಎಂದು ಹೇಳಿದರು.

ಕಾರಂತರ ಪುತ್ರಿ, ಒಡಿಸ್ಸಿ ನೃತ್ಯ ಕಲಾವಿದೆ ಕ್ಷಮಾ ರಾವ್ ಮಾತನಾಡಿ, ‘ಕಾರಂತರ ಮೂಲ ದೃಷ್ಟಿಕೋನವನ್ನು ಇಟ್ಟುಕೊಂಡು ಅಭಿವೃದ್ಧಿ ಕೆಲಸ ನಡೆಯಬೇಕು. ಬಾಲವನದಲ್ಲಿ ಪ್ರಕೃತಿ ಪಾಠ ಶಾಲೆ ಕಾರಂತರ ಕನಸಾಗಿತ್ತು. ಇಲ್ಲಿನ ಪ್ರಕೃತಿಯನ್ನು ಕಾರಂತ ಜೈವಿಕ ವನವಾಗಿ ನಿರ್ಮಿಸಬೇಕು. ಕಾರಂತರ ವಿವಿಧ ಚಿತ್ರಗಳ ಗ್ಯಾಲರಿ ನಿರ್ಮಿಸಿ, ಅದಕ್ಕೆ ‘ಹುಚ್ಚು ಮನಸ್ಸಿನ ಹತ್ತು ಮುಖ’ಎಂಬ ಹೆಸರಿಡಬೇಕು. ಯಾವುದೇ ಸಂದರ್ಭದಲ್ಲಿಯೂ ಕಾರಂತರ ಮೂಲ ಆಶಯಗಳಿಗೆಧಕ್ಕೆಯಾಗಬಾರದು’ ಎಂದರು.

ಬಾಲವನ ಪ್ರಶಸ್ತಿ

ಮಂಗಳವಾರ ಸಂಜೆ ನಡೆದ ಸಮಾರಂಭದಲ್ಲಿ ಹಿರಿಯ ಸಾಹಿತಿ ವೈದೇಹಿ ಅವರಿಗೆ ‘ಬಾಲವನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅದಕ್ಕೆ ಮೊದಲು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕಾರಂತರನ್ನು ಸ್ಮರಿಸಲಾಯಿತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry