ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಸೈಕ್ಲಿಸ್ಟ್‌ಗಳಿಗೆ ಐದು ಚಿನ್ನ

Last Updated 10 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಸೈಕ್ಲಿಸ್ಟ್‌ ಗಳು ಮಂಗಳವಾರ ಇಂದಿರಾಗಾಂಧಿ ಕ್ರೀಡಾಂಗಣದ ವೆಲೊಡ್ರಾಮ್‌ನಲ್ಲಿ ಆರಂಭವಾದ  ಏಷ್ಯಾ ಕಪ್ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಐದು ಚಿನ್ನದ ಪದಕ ಗೆದ್ದರು.

ಚಾಂಪಿಯನ್‌ಷಿಪ್ ಮೊದಲ ದಿನ ನಡೆದ ಎಂಟು ವಿಭಾಗಗಳ ಫೈನಲ್‌ಗಳಲ್ಲಿ ಆತಿಥೇಯ ತಂಡವು ಐದರಲ್ಲಿ ಜಯಗಳಿಸಿತು. ಅಲ್ಲದೇ ನಾಲ್ಕು ಬೆಳ್ಳಿ ಪದಕ ಗಳಿಸಿದ ಸಾಧನೆಯನ್ನೂ ಮಾಡಿದರು.

ಜೂನಿಯರ್ ಬಾಲಕರ ವಿಭಾಗದ 15 ಕಿ.ಮೀ ಸ್ಪರ್ಧೆಯಲ್ಲಿ 29 ಪಾಯಿಂಟ್ಸ್‌ ಗಳಿಸಿದ ಅಶ್ವಿನ್ ಪಾಟೀಲ ಚಿನ್ನದ ಪದಕ ಗೆದ್ದರು. ಇನ್ನೊಬ್ಬ ಸ್ಪರ್ಧಿ ನಮನ್ ಕಪಿಲ್ ಬೆಳ್ಳಿ ಪದಕ ಪಡೆದರು. ಸೌದಿ ಅರೇಬಿಯಾದ ಹಸನ್ 21 ಪಾಯಿಂಟ್ಸ್‌ಗಳೊಂದಿಗೆ ಕಂಚು ಪಡೆದರು.

ಟೀಮ್‌ ಸ್ಪ್ರಿಂಟ್‌ನಲ್ಲಿ ಸುಶೀಕಲಾ ಮತ್ತು ಮಯೂರಿ ಅವರು ಚಿನ್ನದ ಪದಕ ಗೆದ್ದರು. 37.000 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಜಯಶ್ರೀ ಮತ್ತು ವೈಷ್ಣವಿ ಅವರು 39.544ಸೆಕೆಂಡುಗಳಲ್ಲಿ ಗುರಿಮುಟ್ಟಿ ಬೆಳ್ಳಿ ಪಡೆದರು. ಯುಎಇ ತಂಡವು ಕಂಚು ಪಡೆಯಿತು.

500 ಮೀಟರ್ಸ್‌ ಟೈಮ್‌ಟ್ರಯಲ್ಸ್‌ ನಲ್ಲಿ ಸುಶೀಕಲಾ ಅವರು 37.702 ಸೆಕೆಂಡುಗಳಲ್ಲಿ ಜಯ ಸಾಧಿಸಿ ಚಿನ್ನ ವನ್ನು ಕೊರಳಿಗೇರಿಸಿಕೊಂಡರು.

ಇಂಡೋನೆಷ್ಯಾದ ಇವಾಂಗ್ಲಿನಾ ಲಯನ್ಟಿನ್ ಬೆಳ್ಳಿ ಪಡೆದರು.

ರಾಷ್ಟ್ರೀಯ ದಾಖಲೆ ಬರೆದ ಸಾಹಿಲ್–ರಂಜೀತ್:  ಪುರುಷರ ಎಲೀಟ್ ತಂಡದ ವಿಭಾಗದಲ್ಲಿ ಸಾಹಿಲ್ ಕುಮಾರ್ ಮತ್ತು ರಂಜೀತ್ ಸಿಂಗ್ ಅವರು ರಾಷ್ಟ್ರೀಯ ದಾಖಲೆ ಬರೆದರು. 47.399 ಸೆಕೆಂಡುಗಳಲ್ಲಿ ಜಯದ ಗೆರೆ ಮುಟ್ಟಿದ ಅವರು ಚಿನ್ನ ಗೆದ್ದರು. ಸೌದಿ ಅರೇಬಿಯಾದ ಬೆಳ್ಳಿ ಗೆದ್ದಿತು.

ಟೀಮ್‌ ಸ್ಪ್ರಿಂಟ್‌ ವಿಭಾಗದಲ್ಲಿ ಜೂನಿಯರ್ ಬಾಲಕರ ತಂಡದ ಜೆ.ಕೆ. ಅಶ್ವಿನ್, ಮಯೂರ್ ಪವಾರ್ ಮತ್ತು ಅಭಿಷೇಕ್ ಕಾಶೀದ್ ಅವರು ಚಿನ್ನ ಗಳಿಸಿದರು. 47.397ಸೆಕೆಂಡುಗಳಲ್ಲಿ ಗುರಿ ಸಾಧಿಸಿದರು.

ದೆಬೋರಾಗೆ ಎರಡು ಬೆಳ್ಳಿ: ಸೀನಿಯರ್ ಎಲೀಟ್ ವಿಭಾಗದಲ್ಲಿ ಭಾರತದ ಅಗ್ರಕ್ರಮಾಂಕದ ಸೈಕ್ಲಿಸ್ಟ್‌ ದೆಬೊರಾ ಎರಡು ಬೆಳ್ಳಿ ಪದಕಗಳನ್ನು ಗೆದ್ದರು. ಮಹಿಳೆಯರ 500 ಮೀಟರ್ಸ್‌ ಎಲೀಟ್ ವಿಭಾಗದಲ್ಲಿ 35.083ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಅವರು ಎರಡನೇ ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT