ಟೆನಿಸ್‌: ವಿರಾಜ್‌, ಮನಸ್ವಿ ಚಾಂಪಿಯನ್‌

ಮಂಗಳವಾರ, ಜೂನ್ 18, 2019
24 °C

ಟೆನಿಸ್‌: ವಿರಾಜ್‌, ಮನಸ್ವಿ ಚಾಂಪಿಯನ್‌

Published:
Updated:

ಬೆಂಗಳೂರು: ವಿರಾಜ್‌ ಆನಂದ್‌ ಕುಮಾರ್‌ ಮತ್ತು ಮನಸ್ವಿ ವರ್ಧನ್‌ ಅವರು ಫಾರ್ಚೂನ್‌ ಕ್ರೀಡಾ ಅಕಾಡೆಮಿ ಆಶ್ರಯದ ಎಐಟಿಎ 16 ವರ್ಷದೊಳಗಿನವರ ಟ್ಯಾಲೆಂಟ್‌ ಸೀರಿಸ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ಸಿಂಗಲ್ಸ್‌ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಕೆಂಗೇರಿಯ ಎಫ್‌ಎಸ್‌ಎ ಅಂಗಳದಲ್ಲಿ ಮಂಗಳವಾರ ನಡೆದ ಬಾಲಕರ ಸಿಂಗಲ್ಸ್‌ ವಿಭಾಗದ ಫೈನಲ್‌ ಹೋರಾಟದಲ್ಲಿ 16ನೇ ಶ್ರೇಯಾಂಕಿತ ಆಟಗಾರ ವಿರಾಜ್‌ 6–4, 6–4ರಲ್ಲಿ ಕೆ.ವಿಶ್ವಾಸ್‌ ಅವರನ್ನು ಮಣಿಸಿದರು.

ಇದಕ್ಕೂ ಮೊದಲು ನಡೆದಿದ್ದ ಸೆಮಿಫೈನಲ್‌ ಪಂದ್ಯಗಳಲ್ಲಿ ವಿಶ್ವಾಸ್‌ 9–4ರಲ್ಲಿ ವಿದ್ವಾನ್‌ ಜಕ್ಕಲಿ ಎದುರೂ, ವಿರಾಜ್‌ 9–2ರಲ್ಲಿ ಎಸ್‌.ವಿಶಾಲ್‌ ಮೇಲೂ ಗೆದ್ದಿದ್ದರು.

ಬಾಲಕಿಯರ ಸಿಂಗಲ್ಸ್‌ ವಿಭಾಗದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಒಂಬತ್ತನೇ ಶ್ರೇಯಾಂಕಿತ ಆಟಗಾರ್ತಿ ಂನಸ 2–6, 7–5, 7–6ರಲ್ಲಿ ಖುಷಿ ವಿಶ್ವನಾಥ್‌ ಸವಾಲು ಮೀರಿ ನಿಂತರು.

ನಾಲ್ಕರ ಘಟ್ಟದ ಹೋರಾಟಗಳಲ್ಲಿ ಮನಸ್ವಿ 9–8ರಲ್ಲಿ ಶೆರಾನ್‌ ವಿಲಿಯಮ್ಸ್‌ ಎದುರೂ, ಖುಷಿ 9–5ರಲ್ಲಿ ಎ.ವಾಗ್ದೆ ಮೇಲೂ ವಿಜಯಿಯಾಗಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry