ಭಾನುವಾರ, ಸೆಪ್ಟೆಂಬರ್ 22, 2019
22 °C

ಕಣ್ಣೂರು ಭಯೋತ್ಪಾದಕ ತರಬೇತಿ ಶಿಬಿರ ಪ್ರಕರಣ: ವ್ಯಕ್ತಿ ಬಂಧನ

Published:
Updated:

ನವದೆಹಲಿ : 2013ರ ಕಣ್ಣೂರು ಭಯೋತ್ಪಾದಕ ಶಿಬಿರ ಪ್ರಕರಣದಲ್ಲಿ ಬೇಕಾಗಿದ್ದ ಅಜರುದ್ದೀನ್ ಅಲಿಯಾಸ್‌ ಅಜರ್‌ನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ.

ಬಂಧಿತ ಅಜರುದ್ದೀನ್, ಯುವಕರಿಗೆ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ಬಳಸುವ ತರಬೇತಿ ನೀಡುತ್ತಿದ್ದ. ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಇವರನ್ನು ಸಿದ್ಧಪಡಿಸುವುದು ಇವನ ಉದ್ದೇಶವಾಗಿತ್ತು ಎನ್ನುವ ಆರೋಪ ಇದೆ.

2013ರಲ್ಲಿ ಕಣ್ಣೂರಿನಲ್ಲಿ ಭಯೋತ್ಪಾದಕ ಶಿಬಿರ ಆಯೋಜಿಸಿದ್ದಕ್ಕಾಗಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ (ಎಸ್‌ಡಿಪಿಐ) ಹಾಗೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಗೆ ಸೇರಿದ 24 ಯುವಕರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಎರ್ನಾಕುಲಂನಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯ ಜನವರಿ 20ರಂದು 22 ಆರೋಪಿಗಳ ವಿಚಾರಣೆ ನಡೆಸಿ, 21 ಮಂದಿ ತಪ್ಪಿತಸ್ಥರು ಎಂದು ತೀರ್ಪು ನೀಡಿತ್ತು.

Post Comments (+)