ನ.2ರಿಂದ ಜಗನ್‌ ರೆಡ್ಡಿ ಪಾದಯಾತ್ರೆ

ಸೋಮವಾರ, ಮೇ 20, 2019
30 °C

ನ.2ರಿಂದ ಜಗನ್‌ ರೆಡ್ಡಿ ಪಾದಯಾತ್ರೆ

Published:
Updated:
ನ.2ರಿಂದ ಜಗನ್‌ ರೆಡ್ಡಿ ಪಾದಯಾತ್ರೆ

ಹೈದರಾಬಾದ್ : ವೈಎಸ್‌ಆರ್ ಕಾಂಗ್ರೆಸ್ ಅಧ್ಯಕ್ಷ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ನವೆಂಬರ್ 2ರಿಂದ 3,000 ಕಿ.ಮೀ. ಪಾದಯಾತ್ರೆ ನಡೆಸಲಿದ್ದಾರೆ.

‘ಚಂದ್ರಬಾಬು ನಾಯ್ಡು ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ದೊಡ್ಡ ಮಟ್ಟದಲ್ಲಿ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಇಡುಪುಲಪಾಯದಿಂದ ಆರಂಭವಾಗುವ ಪಾದಯಾತ್ರೆ ಚಿತ್ತೂರು ಮಾರ್ಗವಾಗಿ ಇಡೀ ರಾಜ್ಯವನ್ನು ಹಾದು ಇಚ್ಚಾಪುರಂನಲ್ಲಿ ಮುಕ್ತಾಯವಾಗಲಿದೆ. ಆರು ತಿಂಗಳ ಅವಧಿಗೆ ಈ ಪಾದಯಾತ್ರೆ ಸಾಗಲಿದೆ’ ಎಂದು ಜಗನ್ ಹೇಳಿದ್ದಾರೆ.

ಪಾದಯಾತ್ರೆ ಕುರಿತು ಮಂಗಳವಾರ ಹತ್ತನೇ ಯುವಭೇರಿ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು.

ಜಗನ್ ಟೀಕೆಗೆ ಇದೇ ವೇಳೆ ಅಮರಾವತಿಯಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ‘ರಾಜ್ಯ ಸರ್ಕಾರವನ್ನು ದೂರುವ ಮೊದಲು ವಿರೋಧ ಪಕ್ಷದ ನಾಯಕರು ತಮ್ಮ ಸಂಸದರಿಗೆ ರಾಜೀನಾಮೆ ನೀಡಲು ಹೇಳಬೇಕು. ಅಕ್ರಮ ಆಸ್ತಿ ಪ್ರಕರಣದಲ್ಲಿ ತಮ್ಮ ಬಂಧನ ಸಮೀಪಿಸುತ್ತಿದೆ ಎಂದು ಭೀತಿಗೊಂಡಿದ್ದಾರೆ’ ಎಂದು ಹೇಳಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry