ಅರುಣಾಚಲ ಪ್ರದೇಶ: ಸೇನಾನೆಲೆ ಮೇಲೆ ಶಂಕಿತ ಉಗ್ರರ ದಾಳಿ

ಭಾನುವಾರ, ಜೂನ್ 16, 2019
29 °C

ಅರುಣಾಚಲ ಪ್ರದೇಶ: ಸೇನಾನೆಲೆ ಮೇಲೆ ಶಂಕಿತ ಉಗ್ರರ ದಾಳಿ

Published:
Updated:

ಇಟಾನಗರ: ಅರುಣಾಚಲಪ್ರದೇಶದ ನೌಸಾದಲ್ಲಿರುವ ಸೇನಾಪಡೆಯ ಕಾರ್ಯಾಚರಣೆ ನೆಲೆ (ಸಿಒಬಿ) ಮೇಲೆ ಶಂಕಿತ ಭಯೋತ್ಪಾದಕರು ಮಂಗಳವಾರ ದಾಳಿ ನಡೆಸಿದ್ದಾರೆ.

ದಾಳಿಯಿಂದ ಯಾವುದೇ ಸಾವು–ನೋವು, ಅಥವಾ ಸ್ವತ್ತು ಹಾನಿಗೊಳಗಾಗಿರುವ ವರದಿಯಾಗಿಲ್ಲ. ನಾಗಾಲ್ಯಾಂಡ್‌ ರಾಷ್ಟ್ರೀಯವಾದಿ ಸಮಾಜವಾದಿ ಸಂಘಟನೆ (ಎನ್‌ಎಸ್‌ಸಿಎನ್–ಖಪ್ಲಂಗ್) ಬಂಡುಕೋರರು ಈ ದಾಳಿ ನಡೆಸಿರಬಹುದು. ಬೆಳಗಿನ ಜಾವ 1.15ರ ವೇಳೆಗೆ ಗುಂಪೊಂದು ಸಿಒಬಿ ಮೇಲೆ 5–10 ಬಾರಿ ಗುಂಡು ಹಾರಿಸಿದೆ ಮತ್ತು ಲಾಥೋಡ್ ಗ್ರೆನೇಡ್ ಎಸೆದಿದೆ. ಆದರೆ ಇದರಿಂದ ಯಾವುದೇ ಹಾನಿಯಾಗಿಲ್ಲ. ಕಾವಲಿಗಿದ್ದ ಸಿಬ್ಬಂದಿ ತಕ್ಷಣವೇ ಪ್ರತಿದಾಳಿ ನಡೆಸಿದ್ದು, ಗುಂಪು ತಕ್ಷಣವೇ ಪರಾರಿಯಾಗಿದೆ ಎಂದು ಕೊಹಿಮಾದ ರಕ್ಷಣಾ ಪಡೆ ವಕ್ತಾರ ಕರ್ನಲ್ ಚಿರಂಜೀತ್ ಕುಂವರ್ ತಿಳಿಸಿದ್ದಾರೆ.

ದಾಳಿ ನಡೆಸಿದವರನ್ನು ಪತ್ತೆ ಮಾಡಲು ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry