ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ ಕ್ಷೇತ್ರದಲ್ಲಿ ಕಡಿಮೆ ಉದ್ಯೋಗ ಅವಕಾಶಗಳು

Last Updated 10 ಅಕ್ಟೋಬರ್ 2017, 19:32 IST
ಅಕ್ಷರ ಗಾತ್ರ

ನವದೆಹಲಿ: ಮುಂದಿನ ಆರು ತಿಂಗಳಲ್ಲಿ ಮಾಹಿತಿ ತಂತ್ರಜ್ಞಾನ ರಂಗದಲ್ಲಿ (ಐ.ಟಿ) ಹೊಸ ಉದ್ಯೋಗ ಅವಕಾಶಗಳು ಕಡಿಮೆ ಇರಲಿವೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಸ್ವಯಂಚಾಲನೆ ವ್ಯವಸ್ಥೆ ಮತ್ತು ಡಿಜಿಟಲೀಕರಣ ಪ್ರಕ್ರಿಯೆ ಕಾರಣಕ್ಕೆ ಸಾಂಪ್ರದಾಯಿಕ ಕೆಲಸದ ಉದ್ಯೋಗ ಅವಕಾಶಗಳು ಮುಂಬರುವ ಎರಡು ತ್ರೈಮಾಸಿಕ ಅವಧಿಗಳಲ್ಲಿ ಕಡಿಮೆಯಾಗಲಿವೆ ಎಂದು ಎಕ್ಸ್‌ಪೆರಿಸ್‌ ಐಟಿ ಮ್ಯಾನ್‌ಪವರ್‌ ಗ್ರೂಪ್‌ ಇಂಡಿಯಾ ನಡೆಸಿದ ಸಮೀಕ್ಷೆ ತಿಳಿಸಿದೆ.

ಈ ವರ್ಷದ ಅಕ್ಟೋಬರ್‌ನಿಂದ 2018ರ ಮಾರ್ಚ್‌ವರೆಗೆ ಐ.ಟಿ ಉದ್ದಿಮೆಯಲ್ಲಿ ಹೊಸ ನೇಮಕಾತಿ ಉದ್ದೇಶ ಇನ್ನಷ್ಟು ಕಡಿಮೆ ಇರಲಿದೆ ಎಂದೂ ಹೇಳಲಾಗಿದೆ. ಐ.ಟಿ ಸಂಸ್ಥೆಗಳು ಕೆಳ ಮತ್ತು ಮಧ್ಯಮ ಹಂತದಲ್ಲಿ ನೇಮಕಾತಿಗೆ ಆದ್ಯತೆ ನೀಡಿದರೆ, ಹಿರಿಯ ಅಧಿಕಾರಿಗಳ ಹುದ್ದೆಗಳನ್ನು ರದ್ದುಪಡಿಸಲು ಆಲೋಚಿಸುತ್ತಿರುವುದು  ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT