ಸೋಮವಾರ, ಸೆಪ್ಟೆಂಬರ್ 16, 2019
22 °C

ಮೆಸ್ಸಿ ಮ್ಯಾಜಿಕ್ ; 2018 ಫಿಫಾ ವಿಶ್ವಕಪ್‍ನಲ್ಲಿ ಸ್ಥಾನಗಿಟ್ಟಿಸಿಕೊಂಡ ಅರ್ಜೆಂಟೀನಾ

Published:
Updated:
ಮೆಸ್ಸಿ ಮ್ಯಾಜಿಕ್ ; 2018 ಫಿಫಾ ವಿಶ್ವಕಪ್‍ನಲ್ಲಿ ಸ್ಥಾನಗಿಟ್ಟಿಸಿಕೊಂಡ ಅರ್ಜೆಂಟೀನಾ

ಕ್ವಿಟೊ (ಇಕ್ವಡೋರ್): ಜಗತ್ತಿನಾದ್ಯಂತವಿರುವ ಫುಟ್ಬಾಲ್ ಪ್ರೇಮಿಗಳು, ಅರ್ಜೆಂಟೀನಾ ತಂಡದ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಕ್ಷಣ ಅದಾಗಿತ್ತು. ಕ್ವಿಟೊದ ಎಸ್ಟಾಡಿಯೊ ಒಲಿಂಪಿಕೊ ಅಟಾಹೌಲ್ಪಾದಲ್ಲಿ ಬುಧವಾರ ಬೆಳಗ್ಗೆ ನಡೆದ ವಿಶ್ವಕಪ್ ಅರ್ಹತಾ ಸುತ್ತಿನ ನಿರ್ಣಾಯಕ ಪಂದ್ಯದಲ್ಲಿ ಇಕ್ವಡೋರ್ ತಂಡವನ್ನು 3- 1 ಅಂತರದಿಂದ ಸೋಲಿಸಿ ಅರ್ಜೆಂಟೀನಾ ತಂಡ ವಿಶ್ವಕಪ್‍ ಪಂದ್ಯಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದೆ.

ಪಂದ್ಯದದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಅರ್ಜೆಂಟೀನಾ ತಂಡದ ನಾಯಕ ಲಿಯೊನೆಲ್‌ ಮೆಸ್ಸಿಯ ಹ್ಯಾಟ್ರಿಕ್ ಗೋಲುಗಳಿಂದ ಪ್ರಸ್ತುತ ತಂಡ ಭರ್ಜರಿ ಗೆಲುವು ಸಾಧಿಸಿದೆ.

ಪಂದ್ಯದ ಮೊದಲಾರ್ಧದಲ್ಲಿ  2-1 ಅಂತರದಲ್ಲಿ ಮುನ್ನಡೆ ಸಾಧಿಸಿದ್ದ ಅರ್ಜೆಂಟೀನಾ ದ್ವಿತೀಯಾರ್ಧದಲ್ಲಿ ಮೆಸ್ಸಿಯ ಮ್ಯಾಜಿಕ್ ಗೋಲ್ ಮೂಲಕ ರಷ್ಯಾದಲ್ಲಿ ನಡೆಯುವ 2018 ಫಿಪಾ ವಿಶ್ವಕಪ್ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿತು.

Post Comments (+)