ಚೀನಾ ವಿರುದ್ಧ ಭಾರತದ ಗುಡುಗು: ಸಿ.ಟಿ. ರವಿ

ಬುಧವಾರ, ಜೂನ್ 26, 2019
24 °C

ಚೀನಾ ವಿರುದ್ಧ ಭಾರತದ ಗುಡುಗು: ಸಿ.ಟಿ. ರವಿ

Published:
Updated:
ಚೀನಾ ವಿರುದ್ಧ ಭಾರತದ ಗುಡುಗು: ಸಿ.ಟಿ. ರವಿ

ಶಿವಮೊಗ್ಗ: ಭಾರತದಲ್ಲಿ ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸುವ ಪರಿಪಾಠವಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಹೊಡೆಯಲು ಕೈ ಎತ್ತಿದರೆ ಅದನ್ನೇ ಕತ್ತರಿಸುತ್ತಾರೆ ಎಂಬ ಸಂದೇಶ ಚೀನಾಕ್ಕೆ ತಲುಪಿದೆ ಎಂದು ಶಾಸಕ ಸಿ.ಟಿ. ರವಿ ಗುಡುಗಿದರು.

ಕುವೆಂಪು ರಂಗಮಂದಿರದಲ್ಲಿ ಸಾಮಗಾನ ಸಂಸ್ಥೆ ಮಂಗಳವಾರ ಸಂಜೆ ಆಯೋಜಿಸಿದ್ದ ಯುವ ಸ್ಪಂದನ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಭಾರತ ಎಂದರೆ ಚೀನಾಕ್ಕೆ ಭಯವಿದೆ. ದೇಶದ ಒಳಗೆ ಇರುವ ಕೆಲವರು ಚೀನಾದ ಪರ ತುತ್ತೂರಿ ಊದುತ್ತಿದ್ದಾರೆ. ಅವರು ಯಾರನ್ನು ತೃಪ್ತಿಪಡಿಸಲು ಈ ರೀತಿ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದು ಟೀಕಿಸಿದರು.

1962 ರಲ್ಲಿ ಇದ್ದ ಭಾರತದ ನಾಯಕತ್ವ 2017 ರಲ್ಲಿ ಇಲ್ಲ ಎಂಬುದು ದೋಕಲಾ ಘಟನೆಯಲ್ಲಿ ಚೀನಾಕ್ಕೆ ಮನವರಿಕೆಯಾಗಿದೆ. ಇದರಿಂದಾಗಿಯೇ ಚೀನಾ ಹಿಂದೆ ಸರಿದಿದೆ. ಆದರೂ, ಕೆಲವರು ಚೀನಾ ಮುಂದೆ ಭಾರತ ದುರ್ಬಲ ಎಂಬ ಸುದ್ದಿ ಹರಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತನ್ನ ಕಳಪೆ ವಸ್ತುಗಳ ಮೂಲಕ ಭಾರತದ ಮಾರುಕಟ್ಟೆಯನ್ನೇ ಅಕ್ರಮಿಸಿಕೊಂಡಿರುವ ಚೀನಾ ಸ್ನೇಹದ ಹಸ್ತ ಬಿಟ್ಟು ಕದನಕ್ಕೆ ಹಾತುಹೊರೆಯುತ್ತಿದೆ. ಬೇರೆ ಬೇರೆ ರಾಷ್ಟ್ರಗಳ ಮೂಲಕ ಭಾರತದ ನೆಲ ಅಕ್ರಮಿಸಿಕೊಳ್ಳಲು ಯತ್ನಿಸುತ್ತಿದೆ. ಇದಕ್ಕೆ ಭಾರತ ತಕ್ಕ ಉತ್ತರ ನೀಡಲಿದೆ ಎಂದರು. ‘ಏಕ ಭಾರತ ವಿಜೇತ ಭಾರತ’ ವಿಷಯ ಕುರಿತು ನಿತ್ಯಾನಂದ ವಿವೇಕವಂಶಿ ಉಪನ್ಯಾಸ ನೀಡಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry