ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ ವಿಡಿಯೊ ಆಟೊ ಪ್ಲೇ ಆಗದಿರಲು...

Last Updated 11 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾದಂತೆಲ್ಲಾ ಅವುಗಳಲ್ಲಿನ ಆಯ್ಕೆಗಳೂ ಹೆಚ್ಚಾಗುತ್ತಿವೆ. ಬರಹ ಮತ್ತು ಚಿತ್ರಗಳ ಪೋಸ್ಟ್‌ಗೆ ಸೀಮಿತವಾಗಿದ್ದ ಸಾಮಾಜಿಕ ಜಾಲತಾಣಗಳಲ್ಲಿ ಈಗ ವಿಡಿಯೊ ಪೋಸ್ಟ್‌ ಕೂಡ ಜನಪ್ರಿಯವಾಗುತ್ತಿದೆ. ಬರಹ ಮತ್ತು ಚಿತ್ರಗಳ ಜತೆಗೆ ಫೇಸ್‌ಬುಕ್‌ನಲ್ಲಿ ವಿಡಿಯೊ ಪೋಸ್ಟ್‌, ಶೇರ್‌ ಮಾಡುವುದು ಈಗ ಹಲವರ ರೂಢಿ.

ಫೇಸ್‌ಬುಕ್‌ನ ನ್ಯೂಸ್‌ ಫೀಡ್‌ನಲ್ಲಿ ಬರುವ ಸಣ್ಣ ಸಣ್ಣ ವಿಡಿಯೊ ತುಣುಕುಗಳ ಪೈಕಿ ಬಹುತೇಕ ವಿಡಿಯೊಗಳು ಕುತೂಹಲ ಮೂಡಿಸುವಂತಿರುತ್ತವೆ. ಆದರೆ, ಫೇಸ್‌ಬುಕ್‌ ಸ್ಕ್ರಾಲ್‌ ಮಾಡುತ್ತಿರುವ ಸಂದರ್ಭದಲ್ಲಿ ಏಕಾಏಕಿ ವಿಡಿಯೊ ಪ್ಲೇ ಆಗಿ ಸದ್ದು ಮಾಡುವುದು ಹಲವರಿಗೆ ಕಿರಿಕಿರಿ ಉಂಟು ಮಾಡಲೂಬಹುದು. ಅಲ್ಲದೆ, ಫೇಸ್‌ಬುಕ್‌ನಲ್ಲಿ ವಿಡಿಯೊ ಪ್ಲೇ ಆಗುವಾಗ ಸಾಕಷ್ಟು ಡೇಟಾ ಕೂಡ ವ್ಯಯವಾಗುತ್ತದೆ. ಹೀಗಾಗಿ ಫೇಸ್‌ ಬುಕ್‌ ನಲ್ಲಿ ಬರುವ ಎಲ್ಲಾ ವಿಡಿಯೊಗಳೂ ಆಟೊ ಪ್ಲೇ ಆಗದೆ ನಮಗೆ ಬೇಕಾದ ವಿಡಿಯೊಗಳನ್ನು ಮಾತ್ರ ಪ್ಲೇ ಆಗುವಂತೆ ಮಾಡಲು ಇರುವ ಆಯ್ಕೆಗಳ ಬಗ್ಗೆ ಈ ವಾರ ತಿಳಿಯೋಣ.

ಫೇಸ್‌ಬುಕ್‌ ವಿಡಿಯೊ ಆಟೊ ಪ್ಲೇ ಆಗದಂತೆ ಹಾಗೂ ಸದ್ದಿಲದ್ದೆ ಪ್ಲೇ ಆಗುವಂತೆ ಆ್ಯಪ್‌ನಲ್ಲಿ ಕೆಲವು ಆಯ್ಕೆಗಳನ್ನು ಬದಲಿಸಬೇಕಾಗುತ್ತದೆ. ಇದಕ್ಕಾಗಿ ಮೊದಲು ಫೇಸ್‌ಬುಕ್‌ ಆ್ಯಪ್‌ ನಲ್ಲಿ ಕಾಣುವ ಮೂರು ಗೆರೆಗಳ ಮೆನು ಮೇಲೆ ಕ್ಲಿಕ್‌ ಮಾಡಿ. ಬಳಿಕ ಕೆಳಗೆ ಕಾಣುವ ಆ್ಯಪ್‌ ಸೆಟಿಂಗ್ಸ್‌ ಮೇಲೆ ಕ್ಲಿಕ್ಕಿಸಿ. ಇಲ್ಲಿ ಕಾಣುವ Auto-play ಆಯ್ಕೆ ಮೇಲೆ ಕ್ಲಿಕ್‌ ಮಾಡಿ. ಇಲ್ಲಿ ಕಾಣುವ ಆಯ್ಕೆಗಳ ಪೈಕಿ Never Auto-play Videos ಮೇಲೆ ಚೆಕ್‌ ಮಾಡಿ. ಈಗ ನ್ಯೂಸ್‌ ಫೀಡ್‌ನಲ್ಲಿ ಬರುವ ಯಾವ ವಿಡಿಯೊಗಳೂ ಆಟೊ ಪ್ಲೇ ಆಗುವುದಿಲ್ಲ. ನಿಮಗೆ ಬೇಕೆಂದ ವಿಡಿಯೊ ಮೇಲೆ ಟ್ಯಾಪ್‌ ಮಾಡಿದರೆ ಮಾತ್ರ ವಿಡಿಯೊ ಪ್ಲೇ ಆಗುತ್ತದೆ.

ಈ ಆಯ್ಕೆಯಲ್ಲದೆ ವಿಡಿಯೊ ಆಟೊ ಪ್ಲೇ ಆಗಲಿ, ಆದರೆ ಆಡಿಯೊ ಆಟೊ ಪ್ಲೇ ಆಗುವುದು ಬೇಡ ಎಂದಾದರೆ ಆ್ಯಪ್‌ ಸೆಟಿಂಗ್ಸ್‌ ಆಯ್ಕೆಯ ಪುಟದಲ್ಲಿ ಮೊದಲು ಕಾಣುವ Videos in News Feed start with sound ಆಯ್ಕೆಯನ್ನು ಆಫ್‌ ಮಾಡಿ. ಈಗ ವಿಡಿಯೊ ಪ್ಲೇ ಆಗುವ ವೇಳೆ ನೀವು ಆಡಿಯೊ ಐಕಾನ್‌ ಟ್ಯಾಪ್‌ ಮಾಡಿದರೆ ಮಾತ್ರ ಆಡಿಯೊ ಪ್ಲೇ ಆಗುತ್ತದೆ. ಇಲ್ಲವಾದರೆ ವಿಡಿಯೊ ಮಾತ್ರ ಪ್ಲೇ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT