ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊ ಮೊಬೈಲ್

Last Updated 11 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಟಕ್ಸನ್ ಡೀಸೆಲ್ 4ಡಬ್ಲುಡಿ ಬಿಡುಗಡೆ
ಹ್ಯುಂಡೈ ಇದೀಗ ತನ್ನ ಟಕ್ಸನ್ ಮಾದರಿಯನ್ನು ಹೊಸ 4ಡಬ್ಲುಡಿ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಿದೆ. 2.0 ಲೀಟರ್ ಜಿಎಲ್‌ಎಸ್‌ ಆಟೊಮೆಟಿಕ್ ಆವೃತ್ತಿಗೆ ಈ ಆಯ್ಕೆಯನ್ನು ಪರಿಚಯಿಸಿದ್ದು, ಈಗಾಗಲೇ ಟಕ್ಸನ್‌ 4ಡಬ್ಲುಡಿಗೆ ಬುಕ್ಕಿಂಗ್ ಆರಂಭಗೊಂಡಿದೆ.

ಈ ಮಾದರಿಯ 2.0 ಲೀಟರ್ ಡೀಸೆಲ್ ಎಂಜಿನ್ 185ಪಿಎಸ್/400ಎನ್‍ಎಂ ಶಕ್ತಿಯನ್ನು ಉತ್ಪಾದಿಸುತ್ತದೆ. 6 ಸ್ಪೀಡ್ ಆಟೊಮೆಟಿಕ್ ಟ್ರಾನ್ಸ್‌ಮಿಷನ್ ಇದ್ದು, 4ಡಬ್ಲುಡಿ ಲಾಕ್ ಮೋಡ್ ಅಳವಡಿಸಲಾಗಿದೆ.

ಫೋರ್ ವೀಲ್ ಡ್ರೈವ್ ಸಿಸ್ಟಂನೊಂದಿಗೆ ಕೆಲವು ಸುರಕ್ಷಾ ಆಯ್ಕೆಗಳನ್ನು ನೀಡಿದೆ. ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್‌, ಹಿಲ್ ಅಸಿಸ್ಟ್ ಕಂಟ್ರೋಲ್, ಡೌನ್ ಹಿಲ್ ಬ್ರೇಕ್ ಕಂಟ್ರೋಲ್ ಮತ್ತು ಬ್ರೇಕ್ ಅಸಿಸ್ಟ್, ಅಡ್ವಾನ್ಸಡ್ ಟ್ರಾಕ್ಷನ್ ಕಾರ್ನರಿಂಗ್ ಕಂಟ್ರೋಲ್ ಇರಲಿದೆ.

ಇದರ ಬೆಲೆಯನ್ನು ₹25.19 ಲಕ್ಷ (ಎಕ್ಸ್‌ ಶೋರೂಂ, ದೆಹಲಿ) ನಿಗದಿಗೊಳಿಸಲಾಗಿದೆ.

***
ಭವಿಷ್ಯಕ್ಕೆ ‘ಬೀ’ ವಾಹನ

ಬ್ಯಾಲೆನ್ಸಡ್ ಎಕಾನಮಿ ಹಾಗೂ ಎಕಾಲಜಿ ಎಂಬುದರ ಪುಟ್ಟ ರೂಪವೇ ಬೀ. ಭವಿಷ್ಯದಲ್ಲಿ ಚಾಲಕರಹಿತ ವಾಹನಗಳ ಅವಶ್ಯಕತೆ ಉದ್ಭವಿಸಲಿದ್ದು, ಅದನ್ನು ಗಮನದಲ್ಲಿಟ್ಟುಕೊಂಡೇ ಈ ಬೀ ವಾಹನದ ಮಾದರಿಯನ್ನು ಸಿದ್ಧಪಡಿಸಲಾಗಿದೆ.

ಅಮೆರಿಕದಲ್ಲಿ ಇಂಥದ್ದೊಂದು ಮೊಬಿಲಿಟಿ ಪರಿಕಲ್ಪನೆ ಮೂಡಿ ಬಂದಿದೆ. ಜನ ಸಾಗಣೆಯಿಂದ ಹಿಡಿದು ಸರಕು ಸಾಗಣೆವರೆಗೂ ಇದನ್ನು ಬಳಸಬಹುದಾದಂತೆ ರೂಪಿಸಲಾಗಿದೆ. ಮುಂಭಾಗ, ಚಾವಣಿ, ಬದಿಗಳಲ್ಲಿ ಪಾರದರ್ಶಕ ಗಾಜುಗಳಿದ್ದು, ಇದನ್ನೇ ಡಿಜಿಟಲ್ ಡಿಸ್‌ಪ್ಲೇಗಳಂತೆ ಉಪಯೋಗಿಸಲಾಗಿದೆ.

ನಗರಪ್ರದೇಶಗಳಲ್ಲಿ ಇಂಥ ತಂತ್ರಜ್ಞಾನದ ಅವಶ್ಯಕತೆ ಇದ್ದು, ಇದನ್ನು ಆ್ಯಪ್ ಮೂಲಕ ನಿರ್ವಹಿಸಬಹುದು. ಒಮ್ಮೆ ಹತ್ತಿಕೂತು ಅದರಲ್ಲಿ ತಲುಪಬೇಕಾದ ಜಾಗದ ಹೆಸರನ್ನು ನಮೂದಿಸಿದರೆ ಸಾಕು, ನಿಗದಿತ ಸಮಯದಲ್ಲಿ ತಲುಪುತ್ತದೆ. ಇದು ಎಲೆಕ್ಟ್ರಿಕ್ ಮೋಟಾರು ಬೆಂಬಲಿತವಾಗಿದ್ದು, ಗಂಟೆಗೆ 60 ಕಿ.ಮೀ ತಲುಪಬಹುದು. ಅತಿ ನಿಬಿಡ ಸ್ಥಳದಲ್ಲೂ ನುಗ್ಗುವಂತೆ ಮುಂದಿನ ಚಕ್ರಗಳನ್ನು ವಿನ್ಯಾಸಗೊಳಿಸಲಾಗಿದೆ. ಬೀ ಇನ್ನೂ ಮಾದರಿ ಹಂತದಲ್ಲಿದೆ.

***

ಕಾರುಗಳ ಮಹಿಳಾ ಗ್ರಾಹಕರ ಸರ್ವೆ
ಇತ್ತೀಚೆಗೆ ಕಾರುಗಳ ಮಹಿಳಾ ಗ್ರಾಹಕರನ್ನು ಕೇಂದ್ರವಾಗಿಟ್ಟುಕೊಂಡು ಸಮೀಕ್ಷೆ ಯೊಂದು ನಡೆಯಿತು. ಪ್ರಿಮಾನ್ ಏಷಿಯಾ ಆಟೊಮೋಟಿವ್ ಸಂಸ್ಥೆ ‘ವುಮೆನ್ಸ್ ಆಟೊಮೋಟಿವ್ ಬಯರ್ ಸ್ಟಡಿ’ ಅಧ್ಯಯನದ ಫಲಿತಾಂಶವನ್ನು ಪ್ರಕಟಿಸಿತು.

ಕಾರುಗಳ ಮಹಿಳಾ ಗ್ರಾಹಕರ ನಿರೀಕ್ಷೆಗಳನ್ನು ಪೂರೈಸಿರುವ ಬ್ರ್ಯಾಂಡ್‌ಗಳ ಕುರಿತು ಈ ಅಧ್ಯಯನವನ್ನು ನಡೆಸಲಾಗಿದ್ದು, ಅದರಲ್ಲಿ ಹೋಂಡಾ, ಫೋಕ್ಸ್ ವ್ಯಾಗನ್ ಮತ್ತು ನಿಸ್ಸಾನ್ ಅತಿ ತೃಪ್ತಿ ಕೊಟ್ಟ ಕಾರುಗಳಾಗಿ ಹೊರಹೊಮ್ಮಿವೆ.

ತಮ್ಮ ವಾಹನದ ಆಯ್ಕೆಯ ಕುರಿತು ಮಹಿಳೆಯರ ಅಭಿಪ್ರಾಯಗಳನ್ನು ಇಮೇಜ್, ಪ್ರಾಡಕ್ಟ್ ಪರ್ಫಾರ್ಮೆನ್ಸ್, ಸೇಲ್ಸ್ ಅಂಡ್ ಡಿಲಿವರಿ, ಆಫ್ಟರ್ ಸೇಲ್ ಸರ್ವೀಸ್ ಮತ್ತು ಕಾಸ್ಟ್ ಆಫ್ ಓನರ್‌ಶಿಪ್ ಈ ಐದು ನೆಲೆಗಳಲ್ಲಿ ಸಂಗ್ರಹಿಸಲಾಗಿತ್ತು.

ಹೋಂಡಾ, ಓವರ್ ಆಲ್ ವಿನ್ನರ್ ಆಗಿದ್ದರೆ, ಫೋಕ್ಸ್‌ವ್ಯಾಗನ್‌ ಬ್ರ್ಯಾಂಡ್ ಇಮೇಜ್‌ಗೆ ಹೆಚ್ಚು ರ್‍ಯಾಂಕ್ ಪಡೆದುಕೊಂಡಿದೆ. ನಿಸಾನ್, ಆಫ್ಟರ್‌ಸೇಲ್‌ನಲ್ಲಿ ಮುಂದಿದೆ. ಟೊಯೊಟ ಸೇಲ್ಸ್ ಅಂಡ್ ಡೆಲಿವರಿಯಲ್ಲಿ ಗಣನೆಗೆ ಬಂದಿದೆ. ಜೊತೆಗೆ ತಮ್ಮ ಸುರಕ್ಷತೆ ದೃಷ್ಟಿಯಿಂದ ತಮ್ಮದೇ ಕಾರನ್ನು ಹೊಂದಲು ಮಹಿಳೆಯರು ಇಷ್ಟಪಡುತ್ತಿದ್ದಾರೆ ಎಂಬ ಅಂಶವೂ ಬೆಳಕಿಗೆ ಬಂದಿದೆ. ಚಿಕ್ಕ ನಗರಗಳಲ್ಲಿ ಡ್ರೈವಿಂಗ್ ಕಲಿಯುತ್ತಿರುವ ಮಹಿಳೆಯರೂ ಹೆಚ್ಚಿರುವುದಾಗಿ ತಿಳಿದುಬಂದಿದೆ.

ಈ ಅಧ್ಯಯನದಲ್ಲಿ 2,587 ಮಹಿಳೆಯರನ್ನು ಒಳಪಡಿಸಲಾಗಿತ್ತು. ಇದೇ ಏಪ್ರಿಲ್‌ನಿಂದ ಜುಲೈವರೆಗೂ 28 ನಗರಗಳಲ್ಲಿ ಸರ್ವೇ ನಡೆಸಲಾಗಿದೆ. 11 ಜನಪ್ರಿಯ ಬ್ರ್ಯಾಂಡ್‌ಗಳನ್ನು, 80 ಮಾಡೆಲ್‌ಗಳನ್ನು ಇದಕ್ಕೆ ಒಳಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT