ಮನೆ ಗೋಡೆ ಕುಸಿದು ವೃದ್ಧ ಸಾವು: ಆರು ಮಕ್ಕಳಿಗೆ ಗಾಯ

ಭಾನುವಾರ, ಮೇ 26, 2019
22 °C

ಮನೆ ಗೋಡೆ ಕುಸಿದು ವೃದ್ಧ ಸಾವು: ಆರು ಮಕ್ಕಳಿಗೆ ಗಾಯ

Published:
Updated:

ಶಹಾಪುರ: ಸೋಮವಾರ ತಡರಾತ್ರಿಯಿಂದ ಸುರಿದ ಮಳೆಗೆ ತಾಲ್ಲೂಕಿನ ಮಡ್ನಾಳದಲ್ಲಿ ಮಂಗಳವಾರ ಗೋಡೆ ಕುಸಿದು ವೃದ್ಧ ಮೃತಪಟ್ಟಿದ್ದು, ಆರು ಮಕ್ಕಳು ಗಾಯಗೊಂಡಿದ್ದಾರೆ.

ಅಯ್ಯಪ್ಪ ಮರೆಪ್ಪ (80) ಮೃತರು. ಭೀಮಾಶಂಕರ, ಪರಶುರಾಮ, ಶರಣಪ್ಪ, ಅಮರೇಶ, ರಾಯಪ್ಪ, ಕಾಶಿನಾಥ ಗಾಯಗೊಂಡ ಮಕ್ಕಳು. ‘ಗೋಡೆಯ ಬದಿಯಲ್ಲಿ ಮಕ್ಕಳು ಆಟ ಆಡುತ್ತಿದ್ದಾಗ ಗೋಡೆ ಕುಸಿದು ಬಿದ್ದಿತು. ಮಣ್ಣಿನಲ್ಲಿ ಸಿಕ್ಕಿಕೊಂಡಿದ್ದ ಮಕ್ಕಳನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.

ಅದರಲ್ಲಿ ಇಬ್ಬರು ಮಕ್ಕಳಿಗೆ ಕಾಲು ಮುರಿದಿದ್ದು, ಉಳಿದ ಮಕ್ಕಳ ತಲೆಗೆ ಪೆಟ್ಟು ಬಿದ್ದಿದೆ. ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ’ ಎಂದು ತಹಶೀಲ್ದಾರ್‌ ಸೋಮಶೇಖರ ಹಾಗರಗುಂಡಗಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry