‘ಅವಕಾಶಕ್ಕಾಗಿ ಹೇಳಿದ್ದೆಲ್ಲಾ ಕೇಳಲ್ಲ’

ಮಂಗಳವಾರ, ಜೂನ್ 25, 2019
29 °C

‘ಅವಕಾಶಕ್ಕಾಗಿ ಹೇಳಿದ್ದೆಲ್ಲಾ ಕೇಳಲ್ಲ’

Published:
Updated:
‘ಅವಕಾಶಕ್ಕಾಗಿ ಹೇಳಿದ್ದೆಲ್ಲಾ ಕೇಳಲ್ಲ’

ಸಿನಿಮಾಗಳಲ್ಲಿ ಅತ್ಯುತ್ತಮ ಅವಕಾಶ ಸಿಗಬೇಕು ಎಂದರೆ ನಟಿಯರು ಏನು ಬೇಕಾದರೂ ಮಾಡಲು ಸಿದ್ಧರಿರಬೇಕು. ಇದು ತೀರಾ ಮಾಮೂಲಿ ಎನ್ನುವಂತೆ ದಕ್ಷಿಣ ಭಾರತದವರು ನಟಿಯರನ್ನು ನಡೆಸಿಕೊಳ್ಳುತ್ತಾರೆ ಎಂದು ನಟಿ ರಾಧಿಕಾ ಆಪ್ಟೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

‘ನಟಿಯರನ್ನು ಕೆಟ್ಟದಾಗಿ ನಡೆಸಿಕೊಳ್ಳುವ ಪರಿಪಾಠ ದಕ್ಷಿಣ ಭಾರತ ಸಿನಿಕ್ಷೇತ್ರದಲ್ಲಿ ತುಂಬಾ ಇದೆ. ಅದು ಎಷ್ಟು ಅತಿರೇಕದಲ್ಲಿದೆ ಎಂದರೆ ಅವಕಾಶಗಳು ಸಿಗಬೇಕು ಎಂದರೆ ನಟಿ ಅವರೊಂದಿಗೆ ಮಲಗಲೂ ಒಪ್ಪಿಕೊಳ್ಳಬೇಕು. ನಿರ್ಮಾಪಕರೊಬ್ಬರನ್ನು ಭೇಟಿಯಾಗಬೇಕು ಎಂದು ತೆರಳಿದಾಗ ಅವರಿಗೆ ಸಂಬಂಧಿಸಿದವರು ನೇರವಾಗಿ ನನ್ನ ಬಳಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು.

ನಾನು ನಿರ್ಮಾಪಕರನ್ನು ಭೇಟಿಯಾಗುವ ಯೋಚನೆಯನ್ನೇ ಬಿಟ್ಟೆ. ಇಂಥ ಅನೇಕ ಸಂದರ್ಭಗಳು ಎದುರಾಗುತ್ತಲೇ ಇರುತ್ತವೆ. ಗೊತ್ತಿಲ್ಲ, ಈ ಕಾರಣಗಳಿಗಾಗಿಯೇ ನಾನು ಹಲವಾರು ಅವಕಾಶಗಳನ್ನು ಕಳೆದುಕೊಂಡಿದ್ದಿರಬಹುದು’ ಎಂದೂ ಸಂದರ್ಶನದಲ್ಲಿ ವಿವರಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry