ಅಪ್ರಿಯ ಸತ್ಯ

ಗುರುವಾರ , ಜೂನ್ 20, 2019
27 °C

ಅಪ್ರಿಯ ಸತ್ಯ

Published:
Updated:

ಹಿಂದೊಮ್ಮೆ ಕಾಂಗ್ರೆಸ್ ಸಚಿವರಾಗಿದ್ದ ವಿ.ಎಸ್. ಕೌಜಲಗಿಯವರು ಅವರ ಪರ್ಸ್ ಪಿಕ್‌ಪಾಕೆಟ್ ಆಗಿದ್ದಾಗ ‘ಕಾಂಗ್ರೆಸ್‌ನಲ್ಲಿ ಕಿಸೆಗಳ್ಳರಿದ್ದಾರೆ’ ಎಂಬ ಸರ್ಟಿಫಿಕೇಟ್ ಕೊಟ್ಟಿದ್ದರು! ಈಗ ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ಅವರ ಸರದಿ! ಕಾಂಗ್ರೆಸ್‌ನಲ್ಲಿ ಕಳ್ಳರಿರುವುದು ನಿಜ, ಆದರೆ ಕಡಿಮೆ ಸಂಖ್ಯೆಯಲ್ಲಿದ್ದಾರೆ ಎಂದು ‘ಸಮಾಧಾನಪಟ್ಟುಕೊಂಡಿದ್ದಾರೆ’.

2004ರಲ್ಲಿ ಕಾಂಗ್ರೆಸ್ ಪಕ್ಷ ಕಳ್ಳರ ಪಕ್ಷವಾಗಿಯೇ ಇತ್ತು. ಆಗ ಕಳ್ಳರೇ ಪಕ್ಷದಲ್ಲಿ ತುಂಬಿಕೊಂಡಿದ್ದರು ಎಂದೂ ಅವರು ಮರೆತೊ ಅರಿತೊ ಪುನರುಚ್ಚರಿಸಿದ್ದಾರೆ.

‘ಸತ್ಯವನ್ನು ಹೇಳಬೇಕು’, ಆದರೆ ‘ಅಪ್ರಿಯ’ ಸತ್ಯವನ್ನು ಹೇಳಬಾರದೆಂಬ ಮಾತೊಂದಿದೆ. ಜನಪ್ರಿಯತೆ ಕಳೆದುಕೊಂಡು ‘ಅಪ್ರಿಯ’ವಾಗಿರುವ ಪಕ್ಷದ ಶಾಸಕರ ಬಾಯಿಯಿಂದ ಅಪ್ರಿಯ ಸತ್ಯವೇ ಹೊರಬಿದ್ದದ್ದು ಸಹಜ!

-ಪ್ರೊ. ಆರ್.ವಿ. ಹೊರಡಿ, ಧಾರವಾಡ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry