ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಚನೆ ಬದಲಾಗಲಿ

Last Updated 11 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ದೀಪಾವಳಿ, ಹೆಸರೇ ಸೂಚಿಸುವಂತೆ ದೀಪಗಳ ಹಬ್ಬ. ಬೆಳಕಿನ ಹಬ್ಬ. ಅದು ಸದ್ದುಗಳ ಹಬ್ಬವಲ್ಲ. ಪಟಾಕಿಗಳ ನಿಷೇಧವನ್ನು ಕ್ರಿಸ್‌ಮಸ್ ವೃಕ್ಷದೊಂದಿಗೆ ಹೋಲಿಸುವುದು, ಬಕ್ರೀದ್‌ನ ಆಡಿನೊಂದಿಗೆ ಹೋಲಿಸುವುದು ಆ ಮೂಲಕ ಮತೀಯ ನೆಲೆಯಲ್ಲಿ ವಿಮರ್ಶಿಸುವುದು ಮೂರ್ಖತನದ ಮತ್ತು ಅತಿರೇಕದ ಕೃತ್ಯ.

ಹಬ್ಬಗಳು ಸಂಭ್ರಮಕ್ಕೆ, ಖುಷಿಗೆ ಕಾರಣವಾಗಬೇಕೇ ಹೊರತು ಅಪಾಯಕ್ಕೆ, ಆತಂಕಕ್ಕೆ ಕಾರಣವಾಗಬಾರದು. ಕಿವಿ ತಮಟೆ ಒಡೆದುಹೋಗುವಷ್ಟು ಸದ್ದಿನ ಪಟಾಕಿಯನ್ನು ಸಿಡಿಸುವವರು ಎಂದಾದರೂ ಈ ಸದ್ದು ಪುಟ್ಟ ಮಕ್ಕಳು, ಅಶಕ್ತರು, ರೋಗಿಗಳು, ವಯೋವೃದ್ಧರು, ಪ್ರಾಣಿಪಕ್ಷಿಗಳ ಮೇಲೆ ಉಂಟು ಮಾಡುವ ಪರಿಣಾಮದ ಬಗ್ಗೆ ಯೋಚಿಸಿದ್ದಾರೆಯೇ? ಇನ್ನಾದರೂ ಒಂದಿಷ್ಟು ಮಾನವೀಯವಾಗಿ ಯೋಚಿಸೋಣ. ಬೆಳಕಿನ ಹಬ್ಬವಾಗಿ ದೀಪಾವಳಿಯನ್ನು ಆಚರಿಸೋಣ.
-ಶ್ರೀನಿವಾಸ ಕಾರ್ಕಳ, ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT