ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿಯನ್ನು ಬಳಸಿ ಹೋಗಲಿದೆ ಕ್ಷುದ್ರಗ್ರಹ

Last Updated 11 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್: ಭೂಮಿಯಿಂದ 42 ಸಾವಿರ ಕಿ. ಮೀ. ದೂರದಲ್ಲಿ ಕ್ಷು‌ದ್ರಗ್ರಹವೊಂದು ಗುರುವಾರ ಹಾದುಹೋಗಲಿದೆ. 2012 ಟಿಸಿ4 ಹೆಸರಿನ ಕ್ಷುದ್ರಗ್ರಹವು 15ರಿಂದ 30 ಮೀಟರ್ ಸುತ್ತಳತೆ ಹೊಂದಿದೆ ಎನ್ನಲಾಗಿದೆ. ಆದರೆ ಇದರಿಂದ ಭೂಮಿಗೆ ಯಾವುದೇ ಅಪಾಯವಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಅಂಟಾರ್ಕ್ಟಿಕಾದ ಸನಿಹದಲ್ಲಿ ಗುರುವಾರ (ಅಕ್ಟೊಬರ್ 12) ಬೆಳಗ್ಗೆ 11:12ಕ್ಕೆ ಇದು ಹಾದುಹೋಗಲಿದೆ. ಜಾಗತಿಕ ವೀಕ್ಷಣಾ ಜಾಲವನ್ನು ಪರೀಕ್ಷೆಗೊಳಪಡಿಸಲು ಇದು ಸೂಕ್ತ ಅವಕಾಶ ಎಂದು ವಿಜ್ಞಾನಿಗಳು ಹೇಳಿದ್ದಾರೆ.

2012ರಲ್ಲಿ ಹವಾಯಿಯಲ್ಲಿರುವ ಪನೋರಮಿಕ್ ಸರ್ವೆ ಟೆಲಿಸ್ಕೋಪ್ ಮತ್ತು ರ‍್ಯಾಪಿಡ್ ರೆಸ್ಪಾನ್ಸ್ ಸಿಸ್ಟಮ್ (ಪ್ಯಾನ್–ಸ್ಟಾರ್ಸ್) ಮೂಲಕ ಇದನ್ನು ಪತ್ತೆಹಚ್ಚಲಾಗಿತ್ತು. ಇದು 2017ರಲ್ಲಿ ಭೂಮಿಯ ಸನಿಹ ಬರಲಿದೆ ಎಂದು ವಿಜ್ಞಾನಿಗಳು ಅಂದಾಜು ಮಾಡಿದ್ದರು.

ಮುಂದಿನ 100 ವರ್ಷಗಳ ಕಾಲ ಭೂಮಿಯನ್ನು ಯಾವುದೇ ಕ್ಷುದ್ರಗ್ರಹಗಳು ಅಪ್ಪಳಿಸುವ ಸಾಧ್ಯತೆಯಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT