ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಿಯಾ ಮೇಲೆ ಹಾರಿದ ಅಮೆರಿಕದ ಬಾಂಬರ್ ವಿಮಾನಗಳು

Last Updated 11 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್: ಕೊರಿಯಾ ಪರ್ಯಾಯ ದ್ವೀಪದ ಮೇಲೆ ಅಮೆರಿಕದ ಎರಡು ಪ್ರಬಲ ಬಾಂಬರ್ ಯುದ್ಧವಿಮಾನಗಳು ಹಾರಾಟ ನಡೆಸಿ, ಸಾಮರ್ಥ್ಯ ಪ್ರದರ್ಶಿಸಿವೆ. ರಾತ್ರಿ ವೇಳೆ ನಡೆದ ಮೊದಲ ಜಂಟಿ ಕಾರ್ಯಾಚರಣೆ ಇದು ಎಂದು ಅಮೆರಿಕ ಹೇಳಿದೆ. ಜಂಟಿ ಕಾರ್ಯಾಚರಣೆಯಲ್ಲಿ ದಕ್ಷಿಣ ಕೊರಿಯಾ ಹಾಗೂ ಜಪಾನ್ ಭಾಗಿಯಾಗಿದ್ದವು. ಗುವಾಮ್‌ನಲ್ಲಿ ಬೀಡುಬಿಟ್ಟಿರುವ ಅಮೆರಿಕದ ಬಿ–1ಬಿ ಲ್ಯಾನ್ಸರ್ ಬಾಂಬರ್ ವಿಮಾನಗಳು ಹಾರಾಟ ನಡೆಸಿದವು. ಇದು ದೈನಂದಿನ ಸೇನಾ ಕಸರತ್ತು ಎಂದು ಅಮೆರಿಕ ಹೇಳಿಕೊಂಡಿದೆ.

ಉತ್ತರ ಕೊರಿಯಾದ ಪ್ರಚೋದನೆಗೆ ತಕ್ಕ ಪ್ರತ್ಯುತ್ತರ ನೀಡಲು ಇರುವ ಇತರ ಆಯ್ಕೆಗಳ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ತಮ್ಮ ಸೇನಾ ಸಲಹೆಗಾರರ ಜೊತೆ ಮಾತುಕತೆ ನಡೆಸಿದರು.

ಉತ್ತರ ಕೊರಿಯಾ ಜತೆ ಯಾವುದೇ ರಾಜತಾಂತ್ರಿಕ ಯತ್ನಗಳು ಕೆಲಸ ಮಾಡುತ್ತಿಲ್ಲ ಎಂದು ಟ್ರಂಪ್ ಅವರು ಸಭೆಯಲ್ಲಿ ಹೇಳಿದರು ಎಂದು ಮೂಲಗಳು ತಿಳಿಸಿವೆ.

ಫೆಬ್ರುವರಿಯಿಂದೀಚೆಗೆ ಉತ್ತರ ಕೊರಿಯಾವು 15 ಬಾರಿ ಕ್ಷಿಪಣಿ ಪರೀಕ್ಷೆ ನಡೆಸಿದ್ದು, ಅಮೆರಿಕ ಹಾಗೂ ಅದರ ಮಿತ್ರದೇಶಗಳ ಕೆಂಗಣ್ಣಿಗೆ ಗುರಿಯಾಗಿದೆ. ಜಪಾನ್‌ ಮೇಲೆ ಕ್ಷಿಪಣಿ ಹಾರಿಸಿದ್ದ ಉತ್ತರ ಕೊರಿಯಾ, 6ನೇ ಬಾರಿ ಪರಮಾಣು ಪರೀಕ್ಷೆ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT