ಐಐಎಂಬಿ ಸಂಸ್ಥೆ ವತಿಯಿಂದ ‘ದಾನ ಉತ್ಸವ’

ಬುಧವಾರ, ಜೂನ್ 26, 2019
25 °C

ಐಐಎಂಬಿ ಸಂಸ್ಥೆ ವತಿಯಿಂದ ‘ದಾನ ಉತ್ಸವ’

Published:
Updated:
ಐಐಎಂಬಿ ಸಂಸ್ಥೆ ವತಿಯಿಂದ ‘ದಾನ ಉತ್ಸವ’

ಬೆಂಗಳೂರು: ಎಚ್‌ಐವಿ ಪೀಡಿತ ಮಕ್ಕಳಿಗೆ ನೆರವಾಗುವ ಸಲುವಾಗಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನ ಸಾಮಾಜಿಕ ಸಂವೇದನಾ ಕ್ಲಬ್‌ ‘ವಿಕಸನ’ ವತಿಯಿಂದ ಸಂಸ್ಥೆಯ ಪ್ರಾಂಗಣದಲ್ಲಿ ‘ದಾನ ಉತ್ಸವ’ ಆಚರಿಸಲಾಯಿತು.

ದೇಶದ ವಿವಿಧ ಭಾಗಗಳಿಂದ ಬಂದಿದ್ದವರಿಗೆ ಐಐಎಂಬಿ ದಿನಚರಿಯ ಪರಿಚಯ ಮಾಡಿಕೊಳ್ಳುವ ಅವಕಾಶವನ್ನು ಈ ಉತ್ಸವ ಒದಗಿಸಿತು. ಹೈಸ್ಕೂಲ್‌ ವಿದ್ಯಾರ್ಥಿಗಳಿಂದ ಹಿಡಿದು ವೃತ್ತಿಪರರವರೆಗೆ ಒಟ್ಟು 76 ಮಂದಿ ಸಂಸ್ಥೆಯ ಪ್ರಾಂಗಣದಲ್ಲಿ ಒಂದು ದಿನವನ್ನು ಕಳೆದರು. ಇವರಲ್ಲಿ 15ರಿಂದ 54 ವರ್ಷ ಪ್ರಾಯದವರು ಇದ್ದರು.

ಸಂಸ್ಥೆಯ ಬಗ್ಗೆ ತಿಳಿದುಕೊಳ್ಳುವ ಕಾತರದಿಂದ ಬಂದವರನ್ನು ಐಐಎಂಬಿ ನಿರ್ದೇಶಕ ಪ್ರೊ. ಜಿ.ರಘುರಾಮ್‌ ಬರಮಾಡಿಕೊಂಡರು. ಶೈಕ್ಷಣಿಕ ಕಾರ್ಯಕ್ರಮಗಳ ಡೀನ್‌ ಪ್ರೊ. ಸೌರವ್‌ ಮುಖರ್ಜಿ ಅವರು ‘ಸಾಂಘಿಕ ನಡವಳಿಕೆ’, ಪ್ರೊ. ವೈ.ಎಲ್‌.ಆರ್‌. ಮೂರ್ತಿ ಅವರು ‘ಮಾರ್ಕೆಟಿಂಗ್‌ ತಂತ್ರಗಳು’ ಹಾಗೂ ಆರ್‌ಬಿಐ ಅರ್ಥಶಾಸ್ತ್ರ ಪೀಠದ ಪ್ರಾಧ್ಯಾಪಕ ಪ್ರೊ. ರೂಪ ಚಂದ್ರ ಅವರು ಅರ್ಥಶಾಸ್ತ್ರದ ಪಾಠ ಮಾಡಿದರು.

ಪ್ರಾಂಗಣವನ್ನು ಸುತ್ತಾಡಿದ ಪ್ರೇಕ್ಷಕರು ‘3 ಈಡಿಯಟ್ಸ್‌’ ಸಿನಿಮಾ ಚಿತ್ರೀಕರಣ ನಡೆದ ಸ್ಥಳವನ್ನು ಕುತೂಹಲದಿಂದ ವೀಕ್ಷಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕಾರ್ಯಕ್ರಮದ ಮೂಲಕ ಸಂಗ್ರಹವಾದ ಮೊತ್ತವನ್ನು ಎಚ್‌ಐವಿ ಪೀಡಿತ ಮಕ್ಕಳ ಶ್ರೇಯೋಭಿವೃದ್ಧಿಗೆ ಬಳಸುತ್ತೇವೆ ಎಂದು ಸಂಘಟಕರು ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry