ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ.ಕ. ಹಾಲು ಒಕ್ಕೂಟಕ್ಕೆ ‘ಕ್ವಾಲಿಟಿ ಮಾರ್ಕ್‌’

Last Updated 11 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ಎರಡು ಡೇರಿಗಳಿಗೆ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯ ಕ್ವಾಲಿಟಿ ಮಾರ್ಕ್‌ ಲಭಿಸಿದೆ.

ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯ ಹಿರಿಯ ನಿರ್ದೇಶಕ ಸುರೇಶ್‌ ಜಯಸಿಂಘಾನಿ ಅವರು, ಒಕ್ಕೂಟದ ಅಧ್ಯಕ್ಷ ರವಿರಾಜ್‌ ಹೆಗ್ಡೆ ಅವರಿಗೆ ಬುಧವಾರ ಇಲ್ಲಿ ಕ್ವಾಲಿಟಿ ಮಾರ್ಕ್‌ನ ಪ್ರಮಾಣಪತ್ರವನ್ನು ವಿತರಿಸಿದರು.

ಸುರೇಶ್‌ ಜಯಸಿಂಘಾನಿ ಮಾತನಾಡಿ, ‘ಐಎಸ್‌ಒ 22,000’ ಪ್ರಮಾಣಪತ್ರ ಪಡೆದಿರುವ ದೇಶದ ಸುಮಾರು 60 ಡೇರಿಗಳು, ಕ್ವಾಲಿಟಿ ಮಾರ್ಕ್‌ಗೆ ಅರ್ಜಿ ಸಲ್ಲಿಸಿದ್ದವು. ಅವುಗಳ ಪೈಕಿ 21 ಡೇರಿಗಳಿಗೆ ಕ್ವಾಲಿಟಿ ಮಾರ್ಕ್‌ ಸಿಕ್ಕಿದ್ದು, ಇದರಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟದ ಎರಡು ಡೇರಿಗಳು ಸೇರಿವೆ’ ಎಂದರು.

ಒಕ್ಕೂಟದ ಅಧ್ಯಕ್ಷ ರವಿರಾಜ್‌ ಹೆಗ್ಡೆ ಮಾತನಾಡಿ, ‘ಒಕ್ಕೂಟದ ಮಂಗಳೂರು ಡೇರಿ ಹಾಗೂ ಉಡುಪಿ ಡೇರಿಗಳು ಕ್ವಾಲಿಟಿ ಮಾರ್ಕ್‌ ಪಡೆದಿದ್ದು, ಇಲ್ಲಿನ ಹಾಲು ಉತ್ಪನ್ನಗಳನ್ನು ರಫ್ತು ಮಾಡಲು ವೇದಿಕೆ ಸಿಕ್ಕಂತಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT