ಏರ್‌ಟೆಲ್‌ನಿಂದ ಅಗ್ಗದ ಸ್ಮಾರ್ಟ್‌ಫೋನ್‌

ಶುಕ್ರವಾರ, ಮೇ 24, 2019
22 °C

ಏರ್‌ಟೆಲ್‌ನಿಂದ ಅಗ್ಗದ ಸ್ಮಾರ್ಟ್‌ಫೋನ್‌

Published:
Updated:
ಏರ್‌ಟೆಲ್‌ನಿಂದ ಅಗ್ಗದ ಸ್ಮಾರ್ಟ್‌ಫೋನ್‌

ಬೆಂಗಳೂರು: ಮೊಬೈಲ್ ಸೇವಾ ಸಂಸ್ಥೆ ಏರ್‌ಟೆಲ್‌, ಮೊಬೈಲ್‌ ತಯಾರಿಕಾ ಸಂಸ್ಥೆ ಕಾರ್ಬನ್‌ ಮೊಬೈಲ್ಸ್‌ ಸಹಯೋಗದಲ್ಲಿ ಅಗ್ಗದ ‘4ಜಿ’ ಸ್ಮಾರ್ಟ್‌ಫೋನ್‌ ಪರಿಚಯಿಸಿದೆ.

ಈ ‘ಕಾರ್ಬನ್‌ ಎ40’ ಸ್ಮಾರ್ಟ್‌ಫೋನ್, ಫೀಚರ್‌ ಫೋನ್‌ ಬೆಲೆಯಲ್ಲಿ (₹ 1,399) ದೊರೆಯಲಿದೆ. ಆರಂಭದಲ್ಲಿ ಗ್ರಾಹಕರು ₹ 2,899 ಪಾವತಿಸಬೇಕು.

ಮೂರು ವರ್ಷಗಳವರೆಗೆ ಪ್ರತಿ ತಿಂಗಳೂ ₹ 169 ರೀಚಾರ್ಜ್‌ ಮಾಡಿಸಬೇಕು. ಒಂದೂವರೆ ವರ್ಷದ ನಂತರ ಗ್ರಾಹಕರಿಗೆ ₹ 500 ಮತ್ತು ಮೂರು ವರ್ಷಗಳ ನಂತರ ₹ 1000 ಮರು ಪಾವತಿಸಲಾಗುವುದು.

ಒಂದು ವೇಳೆ ಗ್ರಾಹಕರು ಪ್ರತಿ ತಿಂಗಳೂ ₹ 169 ರೀಚಾರ್ಜ್‌ ಮಾಡಿಸಲು ಇಚ್ಛಿಸದಿದ್ದರೆ ತಮ್ಮಿಷ್ಟದ ದರ ಆಯ್ಕೆ ಮಾಡಿಕೊಳ್ಳಬಹುದು. ತಮಗೆ ಬರಬೇಕಾದ ನಗದು ಮರಳಿ ‍ಪಡೆಯಲು 18 ತಿಂಗಳ ಅವಧಿಯಲ್ಲಿ ₹ 3 ಸಾವಿರ ಮೊತ್ತದ ರೀಚಾರ್ಜ್‌ ಮಾಡಿಸಬೇಕು ಎಂದು ಸಂಸ್ಥೆ ತಿಳಿಸಿದೆ.

ಟಚ್‌ಸ್ಕ್ರೀನ್‌, ಎರಡು ಸಿಮ್‌ ಸೌಲಭ್ಯ ಒಳಗೊಂಡಿರುವ ಈ ಮೊಬೈಲ್‌ನಲ್ಲಿ ಯೂಟ್ಯೂಬ್‌, ವಾಟ್ಸ್‌ಆ್ಯಪ್‌ ಮತ್ತು ಫೇಸ್‌ಬುಕ್‌ ಸೌಲಭ್ಯಗಳೂ ಇರಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry