ಲೀಲಾದೇವಿ ಪ್ರಸಾದ್‌ಗೆ ಜೆ.ಪಿ. ಪ್ರಶಸ್ತಿ ಪ್ರದಾನ

ಗುರುವಾರ , ಜೂನ್ 20, 2019
24 °C

ಲೀಲಾದೇವಿ ಪ್ರಸಾದ್‌ಗೆ ಜೆ.ಪಿ. ಪ್ರಶಸ್ತಿ ಪ್ರದಾನ

Published:
Updated:
ಲೀಲಾದೇವಿ ಪ್ರಸಾದ್‌ಗೆ ಜೆ.ಪಿ. ಪ್ರಶಸ್ತಿ ಪ್ರದಾನ

ಬೆಂಗಳೂರು: ಭಾರತಯಾತ್ರಾ ಕೇಂದ್ರ– ಪ್ರತಿಭಾ ಕಲಾನಿಕೇತನ ಸಂಸ್ಥೆಯಿಂದ ಸಂಸ್ಕೃತಿ ಚಿಂತಕಿ ಲೀಲಾದೇವಿ ಆರ್‌.ಪ್ರಸಾದ್‌ ಅವರಿಗೆ ಜೆ.ಪಿ ಪ್ರಶಸ್ತಿಯನ್ನು ಬುಧವಾರ ಇಲ್ಲಿ ನೀಡಿ ಗೌರವಿಸಲಾಯಿತು.

ಲೋಕನಾಯಕ ಜಯಪ್ರಕಾಶ್ ನಾರಾಯಣ್‌ ಜನ್ಮದಿನಾಚರಣೆ ಹಾಗೂ ಪೌರಾಣಿಕ ನಾಟಕೋತ್ಸವದಲ್ಲಿ ಅವರಿಗೆ ₹ 10,000 ನಗದು ಒಳಗೊಂಡ ಪ್ರಶಸ್ತಿಯನ್ನು ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಮತ್ತು ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಜೆ.ಹುಚ್ಚಪ್ಪ ಪ್ರದಾನ ಮಾಡಿದರು.

ಲೀಲಾದೇವಿ ಆರ್‌.ಪ್ರಸಾದ್‌ ಮಾತನಾಡಿ, ‘ರಾಜಕಾರಣವೆಂದರೆ ಅಧಿಕಾರ ಹಿಡಿಯುವುದಕ್ಕೆ ಮಾತ್ರ ಸೀಮಿತವಲ್ಲ ಎಂಬುದನ್ನು ಜೆ.ಪಿ ತೋರಿಸಿದ್ದಾರೆ. ಆದರೆ, ಪ್ರಧಾನಿ ಮತ್ತು ಮಾಜಿ ಪ್ರಧಾನಿಗಳಂತಹ ರಾಷ್ಟ್ರಮಟ್ಟದ ಅನೇಕ ನಾಯಕರಲ್ಲಿ ಜೆ.ಪಿಯವರಲ್ಲಿದ್ದ ಗುಣ ಕಾಣಿಸುತ್ತಿಲ್ಲ. ಹಿರಿಯರನ್ನು ಕಡೆಗಣಿಸಿ, ಅಧಿಕಾರವನ್ನು ಸರ್ವಾಧಿಕಾರದತ್ತ ಕೊಂಡೊಯ್ಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜೆ.ಪಿಯವರ ವಿಚಾರಧಾರೆಗಳು ನಮ್ಮ ರಾಜಕೀಯ ವ್ಯವಸ್ಥೆಗೆ ಮಾರ್ಗದರ್ಶನವಾಗಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

ಪ್ರೊ. ಚಂದ್ರಶೇಖರ ಪಾಟೀಲ ಮಾತನಾಡಿ, ‘ಯಾವುದೇ ರಾಜಕಾರಣಿ ಅಧಿಕಾರದ ಅಮಲು ಮೈಗೇರಿಸಿಕೊಂಡರೆ ಸರ್ವಾಧಿಕಾರಿಯಾಗುತ್ತಾನೆ. ಪ್ರಜಾಪ್ರಭುತ್ವ ಕೊಲ್ಲುತ್ತಾನೆ. ಜನರ ಪ್ರೀತಿ, ವಿಶ್ವಾಸ ದುರುಪಯೋಗಪಡಿಸಿಕೊಂಡು, ಭ್ರಷ್ಟಾಚಾರ ಮತ್ತು ಅನೈತಿಕ ಮಾರ್ಗಗಳನ್ನು ನಮಗೆ ಗೊತ್ತಾಗದಂತೆ ವ್ಯವಸ್ಥೆಯೊಳಗೆ ಹರಿಯಬಿಡುತ್ತಾನೆ. ಇಂತಹ ದುಃಸ್ಥಿತಿಯಲ್ಲಿ ನಮ್ಮ ದೇಶ ಇಂದು ಸಿಲುಕಿದೆ. ಜಯಪ್ರಕಾಶ ನಾರಾಯಣ ಅವರಂತಹ ನಿಜವಾದ ನಾಯಕನನ್ನು ಅರಸುವಂತಹ ಪರಿಸ್ಥಿತಿ ಎದುರಾಗಿದೆ’ ಎಂದರು.

ಜೆ.ಹುಚ್ಚಪ್ಪ ಮಾತನಾಡಿ, 'ಭ್ರಷ್ಟಾಚಾರ, ಸರ್ವಾಧಿಕಾರದ ವಿರುದ್ಧ ಜೆ.ಪಿಯವರು ಪ್ರಾರಂಭಿಸಿದ ಆಂದೋಲನದಿಂದ ಅನೇಕ ಸಜ್ಜನರು ರಾಜಕಾರಣಕ್ಕೆ ಬರಲು ಕಾರಣವಾಯಿತು. ಆದರೆ, ಇಂದು ಅಂತಹ ಚಳವಳಿಗಳು ಕಡಿಮೆಯಾಗುತ್ತಿವೆ’ ಎಂದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry