ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರಘಟ್ಟ ಕೆರೆ: ಎರಡು ದಿನಗಳ‌ಲ್ಲೇ 2 ಅಡಿ ನೀರು

Last Updated 11 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಎರಡು ದಿನಗಳಿಂದ ಹೋಬಳಿಯಲ್ಲಿ ಸುರಿಯುತ್ತಿರುವ ಮಳೆಯಿಂದ ಹೆಸರಘಟ್ಟ ಕೆರೆಗೆ ಎರಡು ಅಡಿಗಳಷ್ಟು ನೀರು ಬಂದಿದೆ.

ತುಂಬಿರುವ ಕೆರೆಯನ್ನು ನೋಡಲು ಪ್ರತಿದಿನ ನೂರಾರು ಮಂದಿ ಬರುತ್ತಿದ್ದಾರೆ. ಸತತ ಮಳೆ ಮತ್ತು ಕೆರೆಗೆ ಹರಿದುಬರುತ್ತಿರುವ ನೀರು ಸೇರಿ, 500 ಎಕರೆ ವಿಸ್ತೀರ್ಣದ ಹೆಸರಘಟ್ಟ ಕೆರೆ ತುಂಬಿದಂತೆ ಕಾಣಿಸುತ್ತಿದೆ. 36 ಅಡಿಯ ಕೆರೆಯಲ್ಲಿ ಈಗ 14 ಅಡಿಗಳಷ್ಟು ನೀರು ಸಂಗ್ರಹಗೊಂಡಿದೆ. 

ಹೋಬಳಿ ಸುತ್ತಮುತ್ತಲಿನ ಎಲ್ಲಾ ಕೆರೆಗಳು ತುಂಬಿ ಕೋಡಿ ಹರಿಯುತ್ತಿವೆ. ಇದರಿಂದ ಒಣಗಿದ ಕೊಳವೆಬಾವಿ­ಗಳಲ್ಲಿ ನೀರು ಸಿಕ್ಕಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.

ಹಿಂದೊಮ್ಮೆ ಬೆಂಗಳೂರಿನ ನೀರಿನ ಸೆಲೆಯಾಗಿದ್ದ ಹೆಸರಘಟ್ಟದ ಕೆರೆ ತುಂಬಲು ಬ್ಯಾತದ ಕೆರೆ ಮತ್ತು ಮಧುರೆ ಕೆರೆ ಎರಡೂ ಕೋಡಿ ಬೀಳುವುದು ಅವಶ್ಯಕ. ಮಧುರೆ ಕೆರೆ ತುಂಬಲು ಇನ್ನೂ 8 ಅಡಿಗಳಷ್ಟು ಬಾಕಿ ಇದೆ.

‘15 ವರ್ಷದ ಹಿಂದೆ ತುಂಬಿದ್ ಕೆರೆ, ಈ ಸಾರಿಯಾದ್ರೂ ತುಂಬೋದೊ ಇಲ್ವೊ? ನೋಡನಾ, ಶಿವ ಮಡಗ್‍ದಂಗ್ ಆಯ್ತದೆ’ ಎಂದು ಹೆಸರಘಟ್ಟ ಗ್ರಾಮಸ್ಥ ನಾಗಣ್ಣ ಹರ್ಷ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT