ದಂಪತಿಯ ಬೆಡ್‌ರೂಂಗೆ ರಹಸ್ಯ ಕ್ಯಾಮೆರಾ ಹಾಕಿದ ಭೂಪ!

ಶುಕ್ರವಾರ, ಜೂನ್ 21, 2019
22 °C

ದಂಪತಿಯ ಬೆಡ್‌ರೂಂಗೆ ರಹಸ್ಯ ಕ್ಯಾಮೆರಾ ಹಾಕಿದ ಭೂಪ!

Published:
Updated:
ದಂಪತಿಯ ಬೆಡ್‌ರೂಂಗೆ ರಹಸ್ಯ ಕ್ಯಾಮೆರಾ ಹಾಕಿದ ಭೂಪ!

ಬೆಂಗಳೂರು: ಬಾಡಿಗೆದಾರರ ಮನೆಯ ಕೋಣೆಗೆ ರಹಸ್ಯ ಕ್ಯಾಮೆರಾ ಅಳವಡಿಸಿ ದಂಪತಿಯ ಪ್ರಣಯದ ದೃಶ್ಯವನ್ನು ಸೆರೆಹಿಡಿದ ‌ಆರೋಪಿಯೊಬ್ಬ, ಆ ದೃಶ್ಯವನ್ನು ವೆಬ್‌ಸೈಟ್‌ಗೆ ಹಾಕಿ ವಿಕೃತಿ ಮೆರೆದಿದ್ದಾನೆ.

ಮನೆಯ ಮಾಲೀಕರ ಪುತ್ರ ಅಂಜನ್ ಈ ಕೃತ್ಯ ಎಸಗಿದ್ದು, ದಂಪತಿ ಕೊಟ್ಟ ದೂರಿನನ್ವಯ ಸೈಬರ್ ಕ್ರೈಂ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

ದಂಪತಿಯು ಆರು ತಿಂಗಳಿನಿಂದ ಕೋರಮಂಗಲದ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅವರ ಮನೆಯ ಒಂದು ಕೀ ಅಂಜನ್ ಬಳಿಯೂ ಇತ್ತು. ಇತ್ತೀಚೆಗೆ ದಂಪತಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಅವರ ಮನೆಗೆ ಹೋಗಿದ್ದ ಆರೋಪಿ, ಕೋಣೆಯಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿ ಬಂದಿದ್ದ ಎಂದು ಪೊಲೀಸರು ಹೇಳಿದ್ದಾರೆ.

ದಂಪತಿ ಕೆಲಸ ಮುಗಿಸಿ ಸಂಜೆ ಮನೆಗೆ ಬಂದ ನಂತರ ಪ್ರಣಯದಲ್ಲಿ ತೊಡಗಿದ್ದರು. ಆ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಮರುದಿನ ಬೆಳಿಗ್ಗೆ ದಂಪತಿ ಕೆಲಸಕ್ಕೆ ತೆರಳಿದ ನಂತರ ಪುನಃ ಅವರ ಮನೆಗೆ ತೆರಳಿದ್ದ ಆರೋಪಿ, ಕ್ಯಾಮೆರಾ ತೆಗೆದುಕೊಂಡು ಬಂದಿದ್ದ. ಅಲ್ಲದೆ, ಅದರಲ್ಲಿರುವ ದೃಶ್ಯಗಳನ್ನು ವೆಬ್‌ಸೈಟ್‌ವೊಂದಕ್ಕೆ ಹಾಕಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇಂಟರ್‌ನೆಟ್‌ನಲ್ಲಿ ಆ ವಿಡಿಯೊ ನೋಡಿದ ದಂಪತಿಯ ಆಪ್ತರೊಬ್ಬರು, ಕರೆ ಮಾಡಿ ವಿಷಯ ತಿಳಿಸಿದ್ದರು. ಇದರಿಂದ ಆಘಾತಕ್ಕೆ ಒಳಗಾದ ದಂಪತಿ, ಆ ವೆಬ್‌ಸೈಟ್ ಪರಿಶೀಲಿಸಿ ಬಳಿಕ ಸೈಬರ್ ಠಾಣೆಯ ಮೆಟ್ಟಿಲೇರಿದ್ದಾರೆ.

ಖಿನ್ನತೆಗೆ ಒಳಗಾದ ಮಹಿಳೆ: ‘ಅಂಜನ್‌ನ ಕೃತ್ಯದಿಂದ ದಂಪತಿ ಮನೆ ಖಾಲಿ ಮಾಡಿದ್ದಾರೆ. ಅಲ್ಲದೆ, ಮಹಿಳೆ ಖಿನ್ನತೆಗೆ ಒಳಗಾಗಿದ್ದು ಚಿಕಿತ್ಸೆಯನ್ನೂ ಪಡೆಯುತ್ತಿದ್ದಾರೆ. ತಲೆಮರೆಸಿಕೊಂಡಿರುವ ಅಂಜನ್‌ಗಾಗಿ ವಿಶೇಷ ತಂಡ ಶೋಧ ನಡೆಸುತ್ತಿದೆ’ ಎಂದು ಸೈಬರ್ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry