ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆರಾಕ್ಸ್ ನೋಟುಗಳ ಚಲಾವಣೆ: ಆರೋಪಿ ಸೆರೆ

Last Updated 11 ಅಕ್ಟೋಬರ್ 2017, 20:03 IST
ಅಕ್ಷರ ಗಾತ್ರ

ಬೆಂಗಳೂರು: ₹ 500 ಹಾಗೂ ₹ 2,000 ಮುಖಬೆಲೆಯ ಜೆರಾಕ್ಸ್‌ ನೋಟುಗಳನ್ನು ಚಲಾವಣೆ ಮಾಡುವ ಯತ್ನದಲ್ಲಿದ್ದ ಭಾಸ್ಕರ್ (48) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ತಮಿಳುನಾಡಿನ ಭಾಸ್ಕರ್, ಪತ್ನಿ–ಮಕ್ಕಳ ಜತೆ ಹಲವು ವರ್ಷಗಳಿಂದ ಕಮರ್ಷಿಯಲ್‌ ಸ್ಟ್ರೀಟ್‌ನ ಲಾಡ್ಜ್‌ವೊಂದರಲ್ಲಿ ಉಳಿದುಕೊಂಡಿದ್ದಾನೆ. ಅ.10ರ ಮಧ್ಯಾಹ್ನ ಮೊದಲಿಯಾರ್‌ ಸ್ಟ್ರೀಟ್‌ಗೆ ಕಾರಿನಲ್ಲಿ ಬಂದಿದ್ದ ಆತ, ಅಲ್ಲಿನ ಅಂಗಡಿಗಳಲ್ಲಿ ಜೆರಾಕ್ಸ್‌ ನೋಟುಗಳನ್ನು ಚಲಾವಣೆ ಮಾಡಲು ಯತ್ನಿಸುತ್ತಿದ್ದ. ಈ ಬಗ್ಗೆ ದೊರೆತ ಖಚಿತ ಮಾಹಿತಿಯಿಂದ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದೆವು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

‘ಭಾಸ್ಕರ್‌ನ ಬಳಿ ₹ 2,000 ಮುಖಬೆಲೆಯ 37 ಜೆರಾಕ್ಸ್ ನೋಟುಗಳು ಹಾಗೂ ₹ 500 ಮುಖಬೆಲೆಯ 19 ಜೆರಾಕ್ಸ್‌ ನೋಟುಗಳು ಪತ್ತೆಯಾಗಿವೆ. ಆ ನಕಲಿ ನೋಟುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಓಮ್ನಿ ವ್ಯಾನ್‌ ಜಪ್ತಿ ಮಾಡಿದ್ದೇವೆ.’

ಏಪ್ರಿಲ್‌ನಲ್ಲೂ ಬಂಧನ: ‘ತರಕಾರಿ ವ್ಯಾಪಾರಿಗಳಿಗೆ ಜೆರಾಕ್ಸ್ ನೋಟುಗಳನ್ನು ಕೊಟ್ಟಿದ್ದ ಈತನನ್ನು ಇದೇ ಏಪ್ರಿಲ್‌ನಲ್ಲಿ ರಾಜಾಜಿನಗರ ಪೊಲೀಸರು ಬಂಧಿಸಿದ್ದರು. ಆಗ ಆತನಿಂದ ಜೆರಾಕ್ಸ್‌ ಯಂತ್ರ ಹಾಗೂ ಕೆಲ ನಕಲಿ ನೋಟುಗಳನ್ನು ಜಪ್ತಿ ಮಾಡಲಾಗಿತ್ತು. ಆ ದಿನ ಠಾಣಾ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಭಾಸ್ಕರ್, ಮತ್ತೆ ಕೃತ್ಯ ಮುಂದುವರಿಸಿದ್ದ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT