ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆನಾಡಿನಲ್ಲಿ ಚಿತ್ತೆ ಮಳೆಯ ಆರ್ಭಟ

ಕಲ್ಯಾಣಿಗಳು ಭರ್ತಿ, ನೆಲ ಮಾಳಿಗೆಗಳಿಗೆ ನೀರು
Last Updated 12 ಅಕ್ಟೋಬರ್ 2017, 5:14 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರದ ಐತಿಹಾಸಿಕ ಹೊಂಡಗಳೆಲ್ಲ ಭರ್ತಿ‌. ಹೂಳುತೆಗಿಸಿದ ಬಹುತೇಕ ಹೊಂಡಗಳು ಕೋಡಿ ಬಿದ್ದಿವೆ. ಮುಂದೆ ಮಳೆಯಾದರೆ ನೀರು ಹಿಡಿದಿಡಲು ನಗರದಲ್ಲಿ ಜಲಪಾತ್ರೆಗಳೇ ಇಲ್ಲದಂತಾಗಿದೆ.

ಕೋಟೆಯ ಅಗಳು, ಅದರ ಹಿಂದಿನ ಒಡ್ಡುಗಳು, ಕರಿವರ್ತೀಶ್ವರ ಕಲ್ಯಾಣಿ, ಸಿಹಿನೀರು ಹೊಂಡ (ಅಪಾಯ ಮಟ್ಟ ಮೀರಿ ಹರಿದು ರಸ್ತೆಯೆಲ್ಲ ಕೊರಕಲಾಗಿದೆ), ಸಂತೆಹೊಂಡ ಕೋಡಿ ಹರಿದು ಸುತ್ತಲಿನ ನೆಲ ಮಾಳಿಗೆಗೆ ನೀರು ನುಗ್ಗಿದೆ.

(ಸಂತೆಹೊಂಡ ತುಂಬಿರುವ ದೃಶ್ಯ)

ಕಲ್ಯಾಣಿಗಳಿಗೆ ಕೊಂಡಿಯಾಗಿರುವ ನಗರದ ಹೊರವಲಯದ ಮಲ್ಲಾಪುರ, ಗೋನೂರು ಕೆರೆ ಭರ್ತಿಯಾಗಿದೆ.

ಹೊಳಲ್ಕೆರೆ ತಾಲ್ಲೂಕು, ಹೊಸದುರ್ಗ ತಾಲ್ಲೂಕುಗಳಲ್ಲಿ ಬಿರುಸಿನ ಮಳೆಯಾಗಿದೆ‌.

ನಗರದಲ್ಲಿ ರಾತ್ರಿ 10ರಿಂದ 1:30ರ ವರೆಗೂ ಜೋರು ಮಳೆಯಾಗಿದೆ‌.

ಮಳೆಯಿಂದಾಗಿ ಹೊಳಲ್ಕೆರೆ ರಸ್ತೆ ಕುಸಿತ, ಐತಿಹಾಸಿಕ ಸಂತೆಹೊಂಡಕ್ಕೆ ನೀರು ಹರಿದುಹೋಗುವ ಮಾರ್ಗ ಕುಸಿತಗೊಂಡಿದ್ದು, ಸಾರ್ವಜನಿಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT