ಶುಕ್ರವಾರ, ಸೆಪ್ಟೆಂಬರ್ 20, 2019
28 °C

ಗೀತಾ ಅಭಿಯಾನ: ನಗರಕ್ಕೆ ನಾಳೆ ಸೋಂದಾ ಶ್ರೀಗಳು

Published:
Updated:

ಬಾಗಲಕೋಟೆ: ಭಗವದ್ಗೀತಾ ಅಭಿಯಾನದ ರೂವಾರಿ ಸೋಂದಾ ಸ್ವರ್ಣವಲ್ಲಿ ಸಂಸ್ಥಾನ ಮಠದ ಪೀಠಾಧಿಪತಿ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮೂರು ದಿನಗಳ ಭೇಟಿಗಾಗಿ ಇದೇ 13 ರಂದು ನಗರಕ್ಕೆ ಬರಲಿದ್ದಾರೆ.

ನವನಗರದ ಸೆಕ್ಟರ್ ನಂ 52 ರಲ್ಲಿರುವ ಶಿವರಾಮ ಹೆಗಡೆ ಅವರ ನಿವಾಸದಲ್ಲಿ ವಾಸ್ತವ್ಯ ಹೂಡಲಿರುವ ಶ್ರೀಗಳು ನವೆಂಬರ್ 2 ರಿಂದ 30 ರವರೆಗೆ ನಡೆಯಲಿರುವ ಗೀತಾ ಅಭಿಯಾನದ ಕುರಿತಂತೆ ಮಾರ್ಗದರ್ಶನ ಮಾಡಲಿದ್ದಾರೆ.

ಅಭಿಯಾನದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ಭಗವದ್ಗೀತೆಯ 6ನೇ ಅಧ್ಯಾಯ ಪಠಿಸುವ ಕಾರ್ಯಕ್ರಮ ಇದ್ದು ಇದೇ 14 ರಂದು ಬೆಳಿಗ್ಗೆ 11 ಗಂಟೆಗೆ ಬಿ.ವಿ.ವಿ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರವಚನ ನೀಡಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಕಣವಿ ವೀರಭದ್ರೇಶ್ವರ ಸಾಂಸ್ಕೃತಿಕ ಭವನದಲ್ಲಿ ಆಸಕ್ತರು, ಮಾತೆಯರು ಹಾಗೂ ಶಿಕ್ಷಕ ವರ್ಗವನ್ನುದ್ದೇಶಿಸಿ ಗೀತಾ ಸಾರದ ಕುರಿತು ಪ್ರವಚನ ನೀಡುವರು.

ಇದೇ 13 ರಿಂದ 15 ರವರೆಗೆ ಶ್ರೀಗಳು ನಗರದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಶಿವರಾಮ ಹೆಗಡೆ (ಮೊಬೈಲ್‌ ಸಂಖ್ಯೆ: 9343111380) ಅವರನ್ನು ಸಂಪರ್ಕಿಸಬಹುದಾಗಿದೆ.

Post Comments (+)