ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂದಲ ಸೃಷ್ಟಿಸಿದ ವಿಜಯೋತ್ಸವ

ಧರಣಿ ನಿರತರಿಗೆ ತಂಪು ಪಾನೀಯ ವಿತರಿಸಿ ಸತ್ಯಾಗ್ರಹಕ್ಕೆ ಕೊನೆ
Last Updated 12 ಅಕ್ಟೋಬರ್ 2017, 5:31 IST
ಅಕ್ಷರ ಗಾತ್ರ

ಮೂಡಲಗಿ: ಮೂಡಲಗಿ ತಾಲ್ಲೂಕಿಗೆ ಸಚಿವ ಸಂಪುಟದಿಂದ ಆಡಳಿತಾತ್ಮಕ ಅನುಮೋದನೆಗೆ ದೊರೆತಿರುವುದಕ್ಕೆ ವಿಜಯೋತ್ಸವದ ವೇಳೆ ಶಾಸಕರ ಬೆಂಬಲಿಗರು ಮತ್ತು ಹೋರಾಟಗಾರರ ಮಧ್ಯೆ ವಾಗ್ವಾದ ನಡೆಯಿತು.

ಬುಧವಾರ ಹೋರಾಟ ಸಮಿತಿಯವರು ಕಲ್ಮೇಶ್ವರ ವೃತ್ತದಲ್ಲಿ ಎಂದಿನಂತೆ 34ನೇ ದಿನದ ಧರಣಿ ಮತ್ತು ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಿದ್ದರು.

ಏತನ್ಮಧ್ಯೆ ನೂರಾರು ಸಂಖ್ಯೆಯಲ್ಲಿದ್ದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿಗರು ಸಚಿವ ಸಂಪುಟದಲ್ಲಿ ಮೂಡಲಗಿ ತಾಲ್ಲೂಕಿಗೆ ಅನುಮೋದನೆ ದೊರೆತಿರುವುದನ್ನು ತಿಳಿದುಕೊಂಡು ಮಧ್ಯಾಹ್ನ 12 ಗಂಟೆಯ ಸಮಾರಿಗೆ ಪುರಸಭೆಯ ಬಳಿಯಿಂದ ಜಯಘೋಷಗಳನ್ನು ಹಾಕುತ್ತಾ ಪಟಾಕಿಗಳನ್ನು ಹಾರಿಸುತ್ತಾ ಧರಣಿ ಸ್ಥಳಕ್ಕೆ ಬಂದು ಶಾಸಕರ ಪರವಾಗಿ ಘೋಷಣೆಗಳನ್ನು ಹಾಕಿದರು.

ಕಳೆದ 34 ದಿನಗಳಿಂದ ಹೋರಾಟ ಮಾಡುತ್ತಿದ್ದ ಶ್ರೀಗಳನ್ನಾಗಲಿ, ಹೋರಾಟದ ಮುಖಂಡರನ್ನಾಗಲಿ ಅವರು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಶಾಸಕರ ಬೆಂಬಲಿಗರು ತಮ್ಮಷ್ಟಕ್ಕೆ ತಾವೇ ವಿಜಯೋತ್ಸವ ಆಚರಿಸುತ್ತಿರುವುದಕ್ಕೆ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು.

ವೇದಿಕೆಯಲ್ಲಿದ್ದ ಹೋರಾಟ ಸಮಿತಿ ಅಧ್ಯಕ್ಷ ಶ್ರೀಪಾದಬೋಧ ಸ್ವಾಮೀಜಿಯವರು ಪಟಾಕಿ ಹಾರಿಸಬೇಡಿ ಎಂದು ಪರಿಪರಿಯಾಗಿ ಕೇಳಿಕೊಂಡರೂ ಶಾಸಕರ ಬೆಂಬಲಿಗರು ಕೇಳದೇ ಧರಣಿ ಸ್ಥಳದಲ್ಲಿ ಕೆಲವರನ್ನು ಎಳೆದಾಡಿದರು. ಶಾಸಕರ ಆಪ್ತರಾದ ನಾಗಪ್ಪ ಮತ್ತು ನಿಂಗಪ್ಪ ಅವರನ್ನು ಸೇರಿದ ಜನರು ದೂಡುತ್ತಿದ್ದಂತೆ ಒಂದಿಷ್ಟು ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಕೆಲಹೊತ್ತಿನ ನಂತರ ಪೊಲೀಸರ ಮಧ್ಯ ಪ್ರವೇಶಿಸಿ ವಾತಾವರಣ ತಿಳಿಮಾಡಿದರು.

ಹೋರಾಟ ಸಮಿತಿ ಸಂಚಾಲಕ ಭೀಮಪ್ಪ ಗಡಾದ ಮಾತನಾಡಿ ‘ಕಳೆದ 34 ದಿನಗಳಿಂದ ಸತ್ಯ ವೇದಿಕೆಯ ಹೋರಾಟಗಾರರು ನಡೆಸಿದ್ದ ಶಾಂತ ರೀತಿಯಿಂದ ಹೋರಾಟದ ಫಲದಿಂದ ಜಯ ದೊರೆತಿದೆ. ಆದರೆ ವಿಜಯೋತ್ಸವದ ನೆಪದಲ್ಲಿ ಅಶಾಂತಿ ಸೃಷ್ಟಿಸಿ ಗಲಭೆ ಮಾಡಬೇಕು ಎಂದು ಬಂದಿದ್ದ ಶಾಸಕರ ಬೆಂಬಲಿಗರನ್ನು ಬಂಧಿಸಬೇಕು’ ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ಮುಖಂಡ ಎಸ್.ಆರ್. ಸೋನವಾಲಕರ ಮಾತನಾಡಿ ಮೂಡಲಗಿ ತಾಲ್ಲೂಕು ಆಗಿರುವುದು ಜನರ ಹೋರಾಟದ ಫಲವಾಗಿದೆ. ಶಾಸಕರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಬೆಂಬಲಿಗರನ್ನು ಬಿಟ್ಟು ಪಟಾಕಿ ಹಾರಿಸಿ ಗುಂಡಾಗಿರಿ ಮಾಡುವುದಕ್ಕೆ ನಾವು ಹೆದರುವದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಲ್ಲೋಳಿಯ ಲಕ್ಕಣ್ಣ ಸವಸುದ್ದಿ ಮಾತನಾಡಿದರು.

ಬಿಜೆಪಿ ಮುಖಂಡರಾದ ಈರಣ್ಣ ಕಡಾಡಿ, ಅಶೋಕ ಪೂಜೇರಿ, ಕಾಂಗ್ರೆಸ್‌ ಮುಖಂಡ ರಮೇಶ ಉಟಗಿ, ಈರಣ್ಣ ಕೊಣ್ಣೂರ, ಕಲ್ಲೋಳಿಯ ಈರಪ್ಪ ಬೆಳಕೂಡ ಮಾತನಾಡಿ ಶಾಸಕರ ಬೆಂಬಗಲಿಗರು ಧರಣಿ ಸ್ಥಳದಲ್ಲಿ ವಿಕೃತಿಯನ್ನು ಪ್ರದರ್ಶಿಸಿ ಅಶಾಂತಿಯನ್ನು ಸೃಷ್ಟಿಸಿದ್ದು ಅತ್ಯಂತ ಹೇಯ ಸಂಗತಿ ಎಂದು ಟೀಕಿಸಿದರು.ಅ ಮೂಡಲಗಿ ತಾಲ್ಲೂಕಿಗೆ ಸಚಿವ ಸಂಪುಟದಿಂದ ಆಡಳಿತಾತ್ಮಕ ಅನುಮೋದನೆಗೆ ದೊರೆತಿರುವುದಕ್ಕೆ ವಿಜಯೋತ್ಸವದ ವೇಳೆ ಶಾಸಕರ ಬೆಂಬಲಿಗರು ಮತ್ತು ಹೋರಾಟಗಾರರ ಮಧ್ಯೆ ವಾಗ್ವಾದ ನಡೆಯಿತು.

ಬುಧವಾರ ಹೋರಾಟ ಸಮಿತಿಯವರು ಕಲ್ಮೇಶ್ವರ ವೃತ್ತದಲ್ಲಿ ಎಂದಿನಂತೆ 34ನೇ ದಿನದ ಧರಣಿ ಮತ್ತು ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಿದ್ದರು.

ಏತನ್ಮಧ್ಯೆ ನೂರಾರು ಸಂಖ್ಯೆಯಲ್ಲಿದ್ದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿಗರು ಸಚಿವ ಸಂಪುಟದಲ್ಲಿ ಮೂಡಲಗಿ ತಾಲ್ಲೂಕಿಗೆ ಅನುಮೋದನೆ ದೊರೆತಿರುವುದನ್ನು ತಿಳಿದುಕೊಂಡು ಮಧ್ಯಾಹ್ನ 12 ಗಂಟೆಯ ಸಮಾರಿಗೆ ಪುರಸಭೆಯ ಬಳಿಯಿಂದ ಜಯಘೋಷಗಳನ್ನು ಹಾಕುತ್ತಾ ಪಟಾಕಿಗಳನ್ನು ಹಾರಿಸುತ್ತಾ ಧರಣಿ ಸ್ಥಳಕ್ಕೆ ಬಂದು ಶಾಸಕರ ಪರವಾಗಿ ಘೋಷಣೆಗಳನ್ನು ಹಾಕಿದರು.

ಕಳೆದ 34 ದಿನಗಳಿಂದ ಹೋರಾಟ ಮಾಡುತ್ತಿದ್ದ ಶ್ರೀಗಳನ್ನಾಗಲಿ, ಹೋರಾಟದ ಮುಖಂಡರನ್ನಾಗಲಿ ಅವರು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಶಾಸಕರ ಬೆಂಬಲಿಗರು ತಮ್ಮಷ್ಟಕ್ಕೆ ತಾವೇ ವಿಜಯೋತ್ಸವ ಆಚರಿಸುತ್ತಿರುವುದಕ್ಕೆ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು.

ವೇದಿಕೆಯಲ್ಲಿದ್ದ ಹೋರಾಟ ಸಮಿತಿ ಅಧ್ಯಕ್ಷ ಶ್ರೀಪಾದಬೋಧ ಸ್ವಾಮೀಜಿಯವರು ಪಟಾಕಿ ಹಾರಿಸಬೇಡಿ ಎಂದು ಪರಿಪರಿಯಾಗಿ ಕೇಳಿಕೊಂಡರೂ ಶಾಸಕರ ಬೆಂಬಲಿಗರು ಕೇಳದೇ ಧರಣಿ ಸ್ಥಳದಲ್ಲಿ ಕೆಲವರನ್ನು ಎಳೆದಾಡಿದರು. ಶಾಸಕರ ಆಪ್ತರಾದ ನಾಗಪ್ಪ ಮತ್ತು ನಿಂಗಪ್ಪ ಅವರನ್ನು ಸೇರಿದ ಜನರು ದೂಡುತ್ತಿದ್ದಂತೆ ಒಂದಿಷ್ಟು ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಕೆಲಹೊತ್ತಿನ ನಂತರ ಪೊಲೀಸರ ಮಧ್ಯ ಪ್ರವೇಶಿಸಿ ವಾತಾವರಣ ತಿಳಿಮಾಡಿದರು.

ಹೋರಾಟ ಸಮಿತಿ ಸಂಚಾಲಕ ಭೀಮಪ್ಪ ಗಡಾದ ಮಾತನಾಡಿ ‘ಕಳೆದ 34 ದಿನಗಳಿಂದ ಸತ್ಯ ವೇದಿಕೆಯ ಹೋರಾಟಗಾರರು ನಡೆಸಿದ್ದ ಶಾಂತ ರೀತಿಯಿಂದ ಹೋರಾಟದ ಫಲದಿಂದ ಜಯ ದೊರೆತಿದೆ. ಆದರೆ ವಿಜಯೋತ್ಸವದ ನೆಪದಲ್ಲಿ ಅಶಾಂತಿ ಸೃಷ್ಟಿಸಿ ಗಲಭೆ ಮಾಡಬೇಕು ಎಂದು ಬಂದಿದ್ದ ಶಾಸಕರ ಬೆಂಬಲಿಗರನ್ನು ಬಂಧಿಸಬೇಕು’ ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ಮುಖಂಡ ಎಸ್.ಆರ್. ಸೋನವಾಲಕರ ಮಾತನಾಡಿ ಮೂಡಲಗಿ ತಾಲ್ಲೂಕು ಆಗಿರುವುದು ಜನರ ಹೋರಾಟದ ಫಲವಾಗಿದೆ. ಶಾಸಕರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಬೆಂಬಲಿಗರನ್ನು ಬಿಟ್ಟು ಪಟಾಕಿ ಹಾರಿಸಿ ಗುಂಡಾಗಿರಿ ಮಾಡುವುದಕ್ಕೆ ನಾವು ಹೆದರುವದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಲ್ಲೋಳಿಯ ಲಕ್ಕಣ್ಣ ಸವಸುದ್ದಿ ಮಾತನಾಡಿದರು.

ಬಿಜೆಪಿ ಮುಖಂಡರಾದ ಈರಣ್ಣ ಕಡಾಡಿ, ಅಶೋಕ ಪೂಜೇರಿ, ಕಾಂಗ್ರೆಸ್‌ ಮುಖಂಡ ರಮೇಶ ಉಟಗಿ, ಈರಣ್ಣ ಕೊಣ್ಣೂರ, ಕಲ್ಲೋಳಿಯ ಈರಪ್ಪ ಬೆಳಕೂಡ ಮಾತನಾಡಿ ಶಾಸಕರ ಬೆಂಬಗಲಿಗರು ಧರಣಿ ಸ್ಥಳದಲ್ಲಿ ವಿಕೃತಿಯನ್ನು ಪ್ರದರ್ಶಿಸಿ ಅಶಾಂತಿಯನ್ನು ಸೃಷ್ಟಿಸಿದ್ದು ಅತ್ಯಂತ ಹೇಯ ಸಂಗತಿ ಎಂದು ಟೀಕಿಸಿದರು.

***

ಸಿಹಿ ಹಂಚಿ, ಗುಲಾಲು ಎರಚಿ ಸಂಭ್ರಮ
ಸಚಿವ ಸಂಪುಟದಲ್ಲಿ ಮೂಡಲಗಿ ತಾಲ್ಲೂಕು ಘೋಷಣೆಯಾಗಿರುವುದನ್ನು ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಹೋರಾಟ ಸಮಿತಿಯವರು ಖಾತ್ರಿ ಮಾಡಿಕೊಂಡ ನಂತರ, ಧರಣಿ ಸ್ಥಳದಲ್ಲಿ ಉಪವಾಸ ಕುಳಿತ ಹೋರಾಟಗಾರರಿಗೆ ತಂಪುಪಾನೀಯ ನೀಡಿ ಧರಣಿ ಮತ್ತು ಸರದಿ ಉಪವಾಸ ಸತ್ಯಾಗ್ರಹವನ್ನು ಮುಗಿಸಿದರು.

ಇದೇ ಸಂದರ್ಭದಲ್ಲಿ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಶ್ರೀಪಾದಬೋಧ ಸ್ವಾಮೀಜಿ ಹಾಗೂ ಸಂಚಾಲಕ ಭೀಮಪ್ಪ ಗಡಾದ ಅವರ ಬೃಹತ್‌ ಕಟೌಟ್‌ಗಳನ್ನು ನಿಲ್ಲಿಸಿ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದರು.

ವೇದಿಕೆಯಲ್ಲಿದ್ದ ಎಲ್ಲ ಹೋರಾಟಗಾರರು ಪರಸ್ಪರ ಸಿಹಿ ವಿತರಿಸಿ ಸಂಭ್ರಮಿಸಿದರು. ಕಲ್ಮೇಶ್ವರ ವೃತ್ತದಿಂದ ಶ್ರೀಗಳ ನೇತೃತ್ವದಲ್ಲಿ ಡೊಳ್ಳು, ಝಾಂಜ್‌ ಪಥ ಸೇರಿದಂತೆ ವಿವಿಧ ಸಂಪ್ರದಾಯ ವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜಯಘೋಷ ಹಾಕುತ್ತಾ ಶಿವಬೋಧರಂಗರ ಕೆಳಗಿನ ಮಠಕ್ಕೆ ತೆರಳಿ ಸನ್ನಿಧಿಯ ಆಶೀರ್ವಾದವನ್ನು ಪಡೆದರು. ಅಲ್ಲಿ ಶ್ರೀಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಪರಸ್ಪರ ಗುಲಾಲು ಎರಚಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT