‘ಸಿಂಗರ್‌ ಆಫ್‌ ಕರ್ನಾಟಕ’ ಸ್ಪರ್ಧೆ

ಸೋಮವಾರ, ಮೇ 27, 2019
23 °C

‘ಸಿಂಗರ್‌ ಆಫ್‌ ಕರ್ನಾಟಕ’ ಸ್ಪರ್ಧೆ

Published:
Updated:
‘ಸಿಂಗರ್‌ ಆಫ್‌ ಕರ್ನಾಟಕ’ ಸ್ಪರ್ಧೆ

ಬೆಳಗಾವಿ: ‘ಗೋಕಾಕ ಸೋನಿ ಸಂಗೀತ ಹಾಗೂ ಸಾಂಸ್ಕೃತಿಕ ಅಕಾಡೆಮಿ ಹಾಗೂ ಎಸ್‌ಎಸ್‌ವಿ ಟಿವಿ ಸಹಯೋಗದಲ್ಲಿ ‘ಸಿಂಗರ್‌ ಆಫ್‌ ಕರ್ನಾಟಕ’ ಸ್ಪರ್ಧೆ ನಡೆಸಲಾಗುವುದು’ ಎಂದು ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಬಿ. ಸೋನು ಅಶೋಕ್‌ ಭಜಂತ್ರಿ ತಿಳಿಸಿದರು.

‘ಇದೇ ತಿಂಗಳ 22ರಿಂದ ಮೊದಲ ಹಂತದ ಆಯ್ಕೆ ಪ್ರಕ್ರಿಯೆ ನಗರದಲ್ಲಿ ನಡೆಯಲಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಯುವ ಗಾಯಕ, ಗಾಯಕಿಯರನ್ನು ಪರಿಚಯಿಸುವ ಮತ್ತು ಬಡ ಹಾಗೂ ಅವಕಾಶವಂಚಿತ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಉದ್ದೇಶ ಹೊಂದಲಾಗಿದೆ. ಎರಡರಿಂದ ಮೂರು ತಿಂಗಳು ಈ ಸ್ಪರ್ಧೆ ನಡೆಯಲಿದೆ. ಬಾಗಲಕೋಟೆ, ಧಾರವಾಡ, ಗದಗ, ಶಿವಮೊಗ್ಗ, ಮೈಸೂರು ಹಾಗೂ ಕಲಬುರ್ಗಿಯಲ್ಲೂ ಗಾಯಕರ ಧ್ವನಿಪರೀಕ್ಷೆ ಆಯೋಜಿಸಲಾಗುವುದು. ವಿಜೇತರಿಗೆ ಸಿಂಗರ್‌ ಆಫ್‌ ಕರ್ನಾಟಕ ವಿಶೇಷ ಬಹುಮಾನ ಕೊಡಲಾಗುವುದು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry