ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಗಿರಿ, ಕೊರಟಗೆರೆಯಲ್ಲಿ ಭಾರಿ ಮಳೆ: 40 ವರ್ಷದ ಬಳಿಕ ತುಂಬಿ ಹರಿದ ಸುವರ್ಣಮುಖಿ ಹಳ್ಳ

6000 ಕೋಳಿಗಳ ಸಾವು, ರಾಗಿ ಬೆಳೆ ನಾಶ
Last Updated 12 ಅಕ್ಟೋಬರ್ 2017, 5:55 IST
ಅಕ್ಷರ ಗಾತ್ರ

ತುಮಕೂರು: ಮಧುಗಿರಿ ಮತ್ತು ಕೊರಟಗೆರೆ ತಾಲ್ಲೂಕಿನಲ್ಲಿ ಭಾರಿ ಮಳೆಯಾಗಿದೆ. ಮಧುಗಿರಿ ತಾಲ್ಲೂಕಿನ ಸುವರ್ಣಮುಖಿ ಹಳ್ಳ 40 ವರ್ಷದ ಬಳಿಕ ತುಂಬಿ ಹರಿದಿದೆ.

ಕೊರಟಗೆರೆ ತಾಲ್ಲೂಕಿನ ದೋಣಿಗರಹಳ್ಳಿ, ಸಿದ್ಧರಬೆಟ್ಟ ಹತ್ತಿರದ ಸಜ್ಕೆವಾನರಕಟ್ಟೆ (ಕ್ಯಾನಲ್ ಕಟ್ಟೆ) ಒಡೆದಿವೆ. ಸಜ್ಜೆವಾನರಕಟ್ಟೆ ಸಮೀಪದ ಅರವಿಂದ ಎಂಬುವರ ಕೋಳಿ ಫಾರಂನಲ್ಲಿ ಮಳೆ ನೀರು ನುಗ್ಗಿ  6000  ಕೋಳಿಗಳು ಸಾವಿಗೀಡಾಗಿವೆ.

ಇದೇ ಪ್ರದೇಶದಲ್ಲಿ ಆಸ್ಟ್ರಾ ಹೂವಿನ ತೋಟ, ರಾಗಿ ಹೊಲ ಹಾನಿಗೀಡಾಗಿವೆ.

ರಾತ್ರಿ ಸುರಿದ ಮಳೆಗೆ ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿ ರಂಗಾಪುರ ಕೆರೆ ಬಿರುಕು ಬಿಟ್ಟಿದೆ. ತಹಶೀಲ್ದಾರ್ ಶ್ರೀನಿವಾಸ್, ನೀರಾವರಿ ಇಲಾಖೆ ಅಧಿಕಾರಿ ಜ್ಞಾನಮೂರ್ತಿ ಪರಿಶೀಲನೆ ನಡೆಸಿದರು.

(ಕೊರಟಗೆರೆ ತಾಲ್ಲೂಕು ತೋವಿನಕೆರೆ ಸಮೀಪ ಸಜ್ಜೆವಾನರ ಕಟ್ಟೆ ಒಡೆದು ರಾಗಿ ಬೆಳೆ ನೆಲಕ್ಕೆ ಬಿದ್ದಿರುವುದು)


(ಕೊರಟಗೆರೆ ತಾಲ್ಲೂಕು ತೋವಿನಕೆರೆ ಸಮೀಪದ ಸಜ್ಜೆ ವಾನರ ಕಟ್ಟೆ ಬುಧವಾರ ರಾತ್ರಿ ಸುರಿದ ಮಳೆಗೆ ಒಡೆದಿರುವುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT