ಮದ್ಯದ ಅಂಗಡಿ ತೆರವುಗೊಳಿಸಲು ಒತ್ತಾಯ

ಬುಧವಾರ, ಮೇ 22, 2019
29 °C

ಮದ್ಯದ ಅಂಗಡಿ ತೆರವುಗೊಳಿಸಲು ಒತ್ತಾಯ

Published:
Updated:

ಮುಗಳಖೋಡ:  ಪಟ್ಟಣದೊಳಗಿನ ಮದ್ಯದ ಅಂಗಡಿಗಳನ್ನು ತೆರವುಗೊಳಿಸಿ, ಅರ್ಧ ಕಿಲೊಮೀಟರ್‌ ದೂರದಲ್ಲಿ ಆರಂಭಿಸುವಂತೆ ಮಾಡಬೇಕು ಎಂದು ಕರ್ನಾಟಕ ನವ ನಿರ್ಮಾಣ ಪಡೆಯ ಕಾರ್ಯಕರ್ತರು ಒತ್ತಾಯಿಸಿದರು.

ರಾಯಬಾಗ ಅಬಕಾರಿ ಇಲಾಖೆ ಸಿಪಿಐ ಮಲ್ಲನಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು, ಅನೇಕ ಸಲ ಮನವಿ ಮಾಡಿದರೂ ಪಟ್ಟಣದೊಳಗಿನ ಮದ್ಯದ ಅಂಗಡಿಗಳನ್ನು ತೆರವುಗೊಳಿಸಿಲ್ಲ, ಈಗಲಾದರೂ ಗ್ರಾಮಸ್ಥರ ಬೇಡಿಕೆ ಮನ್ನಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಅಧ್ಯಕ್ಷ ರಾಜಶೇಖರ ಶೇಗುಣಸಿ, ತಾಲ್ಲೂಕು ಘಟಕದ ಅಧ್ಯಕ್ಷ ಅರುಣ ಠಕ್ಕನ್ನವರ, ಅನೀಲ ಗೋಕಾಕ, ಶಂಕರ ಶೇಗುಣಸಿ, ಮುದಕಪ್ಪ ಶೇಗುಣಶಿ, ರಾಮಣ್ಣ ಶೇಗುಣಸಿ, ದೀಪಕ ತುಗದಲಿ, ದತ್ತು ಶೇಗುಣಸಿ, ಸಿದ್ರಾಮ ಶೇಗುಣಸಿ, ಗಣಪತಿ ಶೇಗುಣಸಿ ಭಾಗವಹಿಸಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry