ಜಿಯೊ ಕೊಡುಗೆ: ರೀಚಾರ್ಜ್ ಮಾಡಿದ ₹399 ಹಣ ಸಂಪೂರ್ಣ ವಾಪಾಸ್

ಗುರುವಾರ , ಮೇ 23, 2019
32 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಜಿಯೊ ಕೊಡುಗೆ: ರೀಚಾರ್ಜ್ ಮಾಡಿದ ₹399 ಹಣ ಸಂಪೂರ್ಣ ವಾಪಾಸ್

Published:
Updated:
ಜಿಯೊ ಕೊಡುಗೆ: ರೀಚಾರ್ಜ್ ಮಾಡಿದ ₹399 ಹಣ ಸಂಪೂರ್ಣ ವಾಪಾಸ್

ನವದೆಹಲಿ:  ದೇಶದ ಟೆಲಿಕಾಂ ನೆಟ್‌ವರ್ಕ್‌ ಕ್ಷೇತ್ರದಲ್ಲಿ ಬೆಲೆ ಸಮರದಿಂದ ಹೊಸ ಗ್ರಾಹಕರನ್ನು ತನ್ನತ್ತ ಸೆಳೆದುಕೊಂಡಿರುವ ರಿಲಯನ್ಸ್‌ ಜಿಯೊ ದೀಪಾವಳಿಗೆ ಹೊಸ ಕೊಡುಗೆಯನ್ನು ಮುಂದಿಟ್ಟಿದೆ.

ಅನಿಯಮಿತ ಕರೆ ಹಾಗೂ ಡಾಟಾ ಬಳಕೆಗಾಗಿ ಮೂರು ತಿಂಗಳಿಗೆ ₹399 ರೀಚಾರ್ಜ್ ಆಫರ್ ನೀಡಿದ್ದ ಜಿಯೋ, ಇದೀಗ ರೀಚಾರ್ಜ್ ಹಣವನ್ನು ಗ್ರಾಹಕರಿಗೆ ವಾಪಾಸ್ ಮರಳಿಸಲು ನಿರ್ಧರಿಸಿದೆ. ಜಿಯೋ ಧನ್ ಧನಾ ಧನ್ ಫೋಸ್ಟರ್‌ಗಳ ಮೂಲಕ ಕೊಡುಗೆ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಿದೆ. 

ರೀಚಾರ್ಜ್ ಮಾಡುವಾಗ ಗ್ರಾಹಕರು ನೀಡಿದ್ದ  ₹399 ಹಣ ₹50ರ 8 ವೋಚರ್‌ಗಳ ಮೂಲಕ ಮರಳಿ ಪಡೆಯಬಹುದಾಗಿದೆ. ಗ್ರಾಹಕರು ಆ ವೋಚರ್‌ಗಳನ್ನು ಮುಂದಿನ ದಿನಗಳಲ್ಲಿ ಅವಶ್ಯಕತೆ ಇದ್ದಾಗ ಬಳಸಿಕೊಂಡು ಪುನಃ ರೀಚಾರ್ಜ್ ಮಾಡಿಕೊಳ್ಳಬಹುದು. ವೋಚರ್‌ಗಳನ್ನು ನವೆಂಬರ್ 15ರ ನಂತರ ಮಾತ್ರ ಬಳಸಿಕೊಳ್ಳಬಹುದು. 

ಈ ಕೊಡುಗೆ ಅಕ್ಟೋಬರ್ 12ರಿಂದ 19ರವರೆಗೆ ಮಾತ್ರ ಅನ್ವಯವಾಗಲಿದೆ. ಈ ದಿನಾಂಕದೊಳಗೆ ರೀಚಾರ್ಜ್ ಮಾಡಿಸಿದವರು ಜಿಯೋ ನೀಡುವ ವೋಚರ್‌ಗಳ ಲಾಭ ಪಡೆದುಕೊಳ್ಳಬಹುದು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry