ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿಗೆ ಕಾದಿದೆ ಗಂಡಾಂತರ: ಬ್ರಹ್ಮಾಂಡ ಗುರೂಜಿ ಭವಿಷ್ಯ

ಬಾಗಿಲು ತೆರೆದ ಹಾಸನಾಂಬೆ ದೇವಸ್ಥಾನ
Last Updated 12 ಅಕ್ಟೋಬರ್ 2017, 8:09 IST
ಅಕ್ಷರ ಗಾತ್ರ

ಹಾಸನ: ಪ್ರಧಾನಿ ನರೇಂದ್ರ ಮೋದಿಗೆ ಗಂಡಾಂತರ ಕಾದಿದೆ ಎಂದು ಬ್ರಹ್ಮಾಂಡ ಗುರೂಜಿ  ನರೇಂದ್ರ ಬಾಬು ಶರ್ಮ ಭವಿಷ್ಯ ನುಡಿದಿದ್ದಾರೆ.

ಹಾಸನದ ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿದ್ದ ವೇಳೆ ಮಾತನಾಡಿದ ಅವರು, ‘ಮೋದಿ ಅವರದು ವೃಶ್ಚಿಕ ರಾಶಿ, ಅವರಿಗೆ ಶನಿ ಚೆನ್ನಾಗಿಲ್ಲ. ಶನಿ ಕೂತಾಗ ಯಾರನ್ನೂ ಬಿಡಲ್ಲ. ಗುರು ತುಲಾ ರಾಶಿಗೆ ಪ್ರವೇಶ ಮಾಡಿದ್ದಾನೆ. ಹೀಗಾಗಿ ಉನ್ನತ ಸ್ಥಾನದಲ್ಲಿದ್ದು ಯಶೋಕೀರ್ತಿ ಹೊಂದಿರುವ ಸಿನಿಮಾ ಸ್ಟಾರ್ ಅಥವಾ ರಾಜಕಾರಣಿಗೆ ಘೋರ ಅಪಮೃತ್ಯು ಕಾದಿದೆ’ ಎಂದರು.

ತಾಯಿಯಿಂದ, ಹೆಣ್ಣಿಂದ( ಪತ್ನಿ) ದೂರ ಇರುವ ಪ್ರಧಾನಿಗೆ ಶುಕ್ರನಿಂದಲೂ ದೋಷ ಇದೆ. ಗುಜರಾತ್‌ನ ಮಹಿಳೆಯೊಬ್ಬಳು ಮೋಹಿಸಲಿದ್ದಾಳೆ. ಇದೇ ಮೋದಿಗೆ ಮುಳುವಾಗಲಿದೆ. ಗಾಂಧಿ ಕುಟುಂಬಕ್ಕೆ ಇಲ್ಲವೇ ಮೋದಿಗೆ ಸಾವು ಸಾವಿರ ಪರ್ಸೆಂಟ್ ಖಚಿತ ಎಂದರು.

ಈ ಗಂಡಾಂತರದಿಂದ ಪಾರಾಗಬೇಕಾದ್ರೆ ದಕ್ಷಿಣದ 6 ಕ್ಷೇತ್ರಗಳ ಸುಬ್ರಹ್ಮಣ್ಯ ದೇವರನ್ನು ಆರಾಧಿಸಬೇಕು ಎಂದು ಸಲಹೆ ನೀಡಿದರು. ಜೊತೆಗೆ ನಾನೇ ಎಲ್ಲಾ ಅನ್ನೋ ಹಿಟ್ಲರ್ ಮನೋಧೋರಣೆಯನ್ನು ಮೋದಿ ಅವರು ಬಿಟ್ಟರೆ ಒಳ್ಳೆಯದು ಎಂದರು.

ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬರಲಿದೆ ಎಂದು ಭವಿಷ್ಯ ನುಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಸಿಎಂ ಆಗುವುದರ ಜೊತೆಗೆ ಕಿಂಗ್ ಮೇಕರ್ ಆಗಲಿದ್ದಾರೆ. ಆದರೆ ಅವರು ಆರೋಗ್ಯವನ್ನು ಚೆನ್ನಾಗಿಟ್ಟುಕೊಂಡು, ತಂದೆ ದೇವೇಗೌಡರ ಮಾತನ್ನು ಚಾಚೂತಪ್ಪದೆ ಕೇಳಬೇಕು. ಹಿಂದಿನ ತಪ್ಪುಗಳನ್ನು ತಿದ್ದುಕೊಂಡು ಮುನ್ನಡೆಯಬೇಕು. ಕಾಂಗ್ರೆಸ್-ಬಿಜೆಪಿಗಿಂತ ಕುಮಾರಸ್ವಾಮಿ ಅವರ ಮೇಲೆ ಉತ್ತರ ಕರ್ನಾಟಕದ ಜನರು ನಂಬಿಕೆ ಇಟ್ಟಿದ್ದಾರೆ, ಅದನ್ನು ಉಳಿಸಿಕೊಳ್ಳಬೇಕು ಎಂದರು.

ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ಸ್ಥಾನಪಲ್ಲಟ ಖಚಿತ, ಅವರ ಪಕ್ಷದಲ್ಲೇ ಅವರನ್ನು ಮುಗಿಸೋ ಹುನ್ನಾರ ನಡಯುತ್ತಿದೆ. ಯಡಿಯೂರಪ್ಪ ಅವರದು ಹಿತ್ತಾಳೆ ಕಿವಿ. ವಿಷವನ್ನು ಪಕ್ಕದಲ್ಲೇ ಇಟ್ಟುಕೊಂಡು ಓಡಾಡುತ್ತಿದ್ದು, ಇದನ್ನು ನಿವಾರಿಸಿಕೊಳ್ಳಬೇಕು ಎಂದರು.

ಹಾಗೆಯೇ ಸಿಎಂ ಸಿದ್ದರಾಮಯ್ಯ ಅಕ್ಕಪಕ್ಕ ಚೂರಿ ಹಾಕುವವರು ಇದ್ದಾರೆ. ಕೆಲ ಕೆಟ್ಟ ಮಂತ್ರಿಗಳಿದ್ದಾರೆ. ಇದನ್ನು ಸರಿಪಡಿಸಿಕೊಂಡು ಹಗರಣ ರಹಿತ ಆಡಳಿತ ನೀಡಬೇಕು. ಅವರು ನಾಸ್ತಿಕರಲ್ಲ, ಬದಲಾಗಿ ಆಸ್ತಿಕರು ಎಂದು ಪ್ರತಿಪಾದಿಸಿದರು.

ಬಾಗಿಲು ತೆರೆದ ಹಾಸನಾಂಬೆ ದೇವಸ್ಥಾನ:

ಹಾಸನಾಂಬೆ ದೇವಸ್ಥಾನದ ಬಾಗಿಲು ಗುರುವಾರ ತೆರೆಯಲಾಯಿತು. ಇದಕ್ಕೂ ಮುನ್ನ   ಅರಸು ವಂಶಸ್ಥರು ಬಾಳೆ ಕಂಬ ಕಡಿದು ಪೂಜೆ ಸಲ್ಲಿಸಿದರು. ಆನಂತರ ಗರ್ಭಗುಡಿಯ ಬಾಗಿಲು ತೆರೆಯಲಾಯಿತು. ದೇವಿಯ ಆಭರಣವನ್ನು ದೇವಾಲಯಕ್ಕೆ ತರಲಾಗಿದ್ದು, ಇಂದು ಸಾರ್ವಜನಿಕರಿಗೆ ದರ್ಶನ ಮಾಡಲು ಅವಕಾಶ ನೀಡಿಲ್ಲ. ಆದರೂ ಸಾಕಷ್ಟು ಜನರು ದೇವಸ್ಥಾನದ ಎದುರು ಗುಂಪುಗೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT