ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ನೋಟು ಮುದ್ರಣ ಜಾಲ ಪತ್ತೆ

ಕೋಟೆ ಠಾಣೆ ಪೊಲೀಸರ ಕಾರ್ಯಾಚರಣೆ, ತಲೆ ಮರೆಸಿಕೊಂಡವರಿಗೆ ಹುಡುಕಾಟ
Last Updated 12 ಅಕ್ಟೋಬರ್ 2017, 8:37 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರದಲ್ಲಿ ಮೊಬೈಲ್‌ ಸೆಂಟರ್‌ನಲ್ಲಿ ನಕಲಿ ನೋಟು ಮುದ್ರಣ ಮಾಡುತ್ತಿದ್ದ ಜಾಲವನ್ನು ಪತ್ತೆ ಮಾಡಿರುವ ಕೋಟೆ ಠಾಣೆ ಪೊಲೀಸರು, ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಮೂವರು ನಾಪತ್ತೆಯಾಗಿದ್ದಾರೆ.

ಹೊಳಲ್ಕೆರೆ ಟಿಪ್ಪುನಗರ ನಿವಾಸಿ ಸೈಯದ್ ತೌಸಿಫ್(26), ಚಿತ್ರದುರ್ಗದ ವೆಂಕಟೇಶ್ವರನಗರ ನಿವಾಸಿ ಮೊಹಮದ್ ಜುಬೇರ್(20), ಮೊಹಮದ್ ಅಪ್ತಾಬ್(20), ಹೊಳಲ್ಕೆರೆ ನಿವಾಸಿ ಮನ್ಸೂರ್ ಅಲಿ(20) ಬಂಧಿತರು. ದಾವಣಗೆರೆಯ ಮಹಮದ್ ಯೂಸೂಫ್, ಬೆಂಗಳೂರಿನ ಪ್ರಕಾಶ್ ಮತ್ತು ಮಹೇಶ್ ತಲೆಮರೆಸಿಕೊಂಡಿರುವ ಆರೋಪಿಗಳು.

ಈ ಆರೋಪಿಗಳು ಮೊಬೈಲ್ ಸೆಂಟರ್‌ನಲ್ಲಿ ನಕಲಿ ನೋಟು ಮುದ್ರಿಸುತ್ತಿದ್ದರು. ಬಂಧಿತರಿಂದ ₹ 2 ಸಾವಿರ ಮುಖಬೆಲೆಯ 64 ನೋಟುಗಳು ಹಾಗೂ ನೋಟು ಮುದ್ರಣ ಪರಿಕರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಎಎಸ್‌ಪಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದಲ್ಲಿ ಕೋಟೆ ಠಾಣೆ ಸಿಪಿಐ ಫೈಜುಲ್ಲಾ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಈ ತಂಡವನ್ನು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ರಾಮಲಕ್ಷ್ಮಣ ಅರಸಿದ್ದಿ ಎಸ್ಪಿ ಶ್ರೀನಾಥ್ ಎಂ. ಜೋಷಿ ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT