ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.10ರಿಂದ ಕೇದಾರ ಸ್ವಾಮೀಜಿ ಭಾವೈಕ್ಯ ಧರ್ಮಸಮ್ಮೇಳನ

ನ್ಯಾಮತಿ ಮಹಾಂತೇಶ್ವರ ಕಲ್ಯಾಣ ಮಂದಿರದಲ್ಲಿ ಪೂರ್ವಭಾವಿ ಸಭೆ
Last Updated 12 ಅಕ್ಟೋಬರ್ 2017, 8:59 IST
ಅಕ್ಷರ ಗಾತ್ರ

ನ್ಯಾಮತಿ: ಭಕ್ತರಲ್ಲಿ ಏನಾನ್ನದರೂ ಸಾಧನೆ ಮಾಡಬೇಕು ಎಂಬ ಸಂಕಲ್ಪ ಇದ್ದರೆ, ಅದು ಅತ್ಯಂತ ಯಶಸ್ವಿಯಾಗಿ ನೆರವೇರುತ್ತದೆ ಎಂದು ಹಿರೇಕಲ್ಮಠದ ಒಡೆಯರ್‌ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಹಿಮವತ್ ಕೇದಾರ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ, ಜನಜಾಗೃತಿ, ಭಾವೈಕ್ಯ ಧರ್ಮ ಸಮ್ಮೇಳನವನ್ನು ಡಿ.10, 11 ಮತ್ತು 12ರಂದು ಹಮ್ಮಿಕೊಳ್ಳುವ ಬಗ್ಗೆ ಗ್ರಾಮದ ಮಹಾಂತೇಶ್ವರ ಕಲ್ಯಾಣ ಮಂದಿರದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವವನ್ನು ಮೂರು ದಿನ ನಡೆಸುವುದು, ಧರ್ಮಸಭೆ, ಅನ್ನ ದಾಸೋಹ, ವಿವಿಧ ಸಮಿತಿಗಳ ರಚನೆ, ಧಾರ್ಮಿಕ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲು ಎಲ್ಲಾ ಜನರ ಸಹಕಾರ ಪಡೆಯಬೇಕು ಎಂದು ಸಭೆಯಲ್ಲಿ ಸೇರಿದ್ದವರು ಸಲಹೆ ನೀಡಿದರು.

ಕೋಹಳ್ಳಿಮಠದ ಎನ್‌.ಕೆ.ವಿಶ್ವಾರಾಧ್ಯ, ಸದಾಶಿವಯ್ಯ ಹಿರೇಮಠ, ಪೂಜಾರ ಚಂದ್ರಶೇಖರ, ಎನ್‌.ಡಿ.ಪಂಚಾಕ್ಷರಪ್ಪ, ನುಚ್ಚಿನ ವಾಗೀಶ, ಆರ್‌.ಮೇಘರಾಜ, ಡಿ.ಎಂ.ವಿಜೇಂದ್ರ, ಸುನಂದಮ್ಮ ಜೀರಿಗೆ, ಡಿ.ಪಿ.ಸತೀಶ, ಲಲಿತಮ್ಮ, ವೀರೇಶ, ಕುಂಬಾರ ಚನ್ನೇಶ, ಬಿ.ಜಯರಾಂ ಇದ್ದರು. ಹವಳದ ಲಿಂಗರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಹವಳದ ವಿಶಾಲ ಪ್ರಾರ್ಥಿಸಿದರು. ಹೊಸಮನೆ ಮಲ್ಲಿಕಾರ್ಜುನ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT