ಮೈದೂರಿನ ವೈದ್ಯ ವಿದ್ಯಾರ್ಥಿನಿ ಚೀನಾದಲ್ಲಿ ಸಾವು

ಭಾನುವಾರ, ಜೂನ್ 16, 2019
22 °C

ಮೈದೂರಿನ ವೈದ್ಯ ವಿದ್ಯಾರ್ಥಿನಿ ಚೀನಾದಲ್ಲಿ ಸಾವು

Published:
Updated:

ರಾಣೆಬೆನ್ನೂರು (ಹಾವೇರಿ ಜಿಲ್ಲೆ): ‘ಚೀನಾದ ಜಿಯಾಂಗ್ಸಿ ಪ್ರಾಂತ್ಯದ ನಾಂಚಂಗ್‌ನಲ್ಲಿ ಸಾಂಪ್ರದಾಯಿಕ ವೈದ್ಯ ಪದ್ದತಿ ವ್ಯಾಸಂಗ ಮಾಡುತ್ತಿದ್ದ ತಾಲ್ಲೂಕಿನ ಮೈದೂರು ಗ್ರಾಮದ ಶಿಲ್ಪಾ ಗೌಡರ್‌ (24) ಸೋಮವಾರ ಮೃತಪಟ್ಟಿದ್ದಾರೆ.

ಈ ವಿಷಯವನ್ನು ಜಿಲ್ಲಾಧಿಕಾರಿ ಡಾ.ವೆಂಕಟೇಶ ಎಂ.ವಿ ಖಚಿತಪಡಿಸಿದ್ದು, ಅವರ ಮೃತದೇಹವನ್ನು ಇಲ್ಲಿಗೆ ತರಲು ವಿದೇಶಾಂಗ ಸಚಿವಾಲಯದ ಮೂಲಕ ಪ್ರಯತ್ನ ನಡೆದಿದೆ ಎಂದರು.

‘ಶಿಲ್ಪಾ ಗೌಡರ್ ಚೀನಾದ ಜಿಂಯಾಗ್ಸಿ ಯುನಿವರ್ಸಿಟಿ ಆಫ್‌ ಟ್ರೆಡಿಶನಲ್ ಚೈನೀಸ್‌ ಮೆಡಿಸಿನ್‌ನಲ್ಲಿ ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿದ್ದರು. ಅಸ್ತಮಾದಿಂದ ಬಳಲುತ್ತಿದ್ದ ಅವರು, ಅಲ್ಲಿನ ಆಸ್ಪತ್ರೆಯೊಂದರಲ್ಲಿ ಇದೇ 9ರಂದು ಮೃತಪಟ್ಟಿದ್ದಾರೆ’ ಎಂದು ತಿಳಿಸಿದರು. ಶಿಲ್ಪಾ ಗೌಡರ್, ಸೋಮನ ಗೌಡರ ಮತ್ತು ಐ.ಎಸ್. ಗೌಡರ್ ದಂಪತಿಯ ಪುತ್ರಿ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry