7
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ಆಕಸ್ಮಿಕವಾಗಿ ಮಹಿಳಾ ಶೌಚಾಲಯ ಪ್ರವೇಶಿಸಿದ ರಾಹುಲ್‌ ಗಾಂಧಿ!

Published:
Updated:
ಆಕಸ್ಮಿಕವಾಗಿ ಮಹಿಳಾ ಶೌಚಾಲಯ ಪ್ರವೇಶಿಸಿದ ರಾಹುಲ್‌ ಗಾಂಧಿ!

ಅಹಮದಾಬಾದ್‌: ಗುಜರಾತ್‌ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿರುವ ರಾಹುಲ್‌ ಗಾಂಧಿ ಆಕಸ್ಮಿಕವಾಗಿ ಮಹಿಳಾ ಶೌಚಾಲಯ ಪ್ರವೇಶಿಸಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಛೋಟಾ ಉದಯಪುರದ ಟೌನ್‌ ಹಾಲ್‌ನಲ್ಲಿ ಯುವ ಜನರೊಂದಿಗೆ ಸಂವಾದ ನಡೆಸಿದ ಬಳಿಕ ರಾಹುಲ್ ಗಾಂಧಿ ಶೌಚಾಲಯದತ್ತ ತೆರಳಿದ್ದಾರೆ. ಈ ವೇಳೆ ಮಹಿಳೆಯರ ಶೌಚಾಲಯ ಪ್ರವೇಶಿಸಿ ಮುಜುಗರಕ್ಕೆ ಒಳಗಾಗಿದ್ದಾರೆ ಎಂದು ಗುಜರಾತ್‌ ಮಾಧ್ಯಮಗಳ ವರದಿ ಮಾಡಿವೆ.

ಶೌಚಾಲಯದ ನಾಮಫಲಕವನ್ನು ಗುಜರಾತಿ ಭಾಷೆಯಲ್ಲಿ ಬರೆದಿದ್ದರಿಂದ  ಈ ಪ್ರಮಾದವಾಗಿದೆ. ರಾಹುಲ್‌ ಗಾಂಧಿ ಮಹಿಳಾ ಶೌಚಾಲಯದಿಂದ ಹೊರ ಬರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ಕಮೆಂಟ್‌ಗಳ ಮಹಾಪೂರವೆ ಹರಿದು ಬರುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry