ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿಎಸ್‌ಎಂ’ ಬೃಹತ್‌ ಮಳಿಗೆ ಉದ್ಘಾಟನೆ

Last Updated 12 ಅಕ್ಟೋಬರ್ 2017, 10:38 IST
ಅಕ್ಷರ ಗಾತ್ರ

ಕಲಬುರ್ಗಿ: ಕಟ್ಟಡ ಸಾಮಗ್ರಿಗಳ ಮಾರಾಟದಲ್ಲಿ ಪ್ರಮುಖವಾಗಿರುವ ‘ಜಿಎಸ್ಎಂ’ ಕಂಪೆನಿಯ ನೂತನ ಮಳಿಗೆ ಬುಧವಾರ ಸೇಡಂ ರಸ್ತೆಯಲ್ಲಿ ಇರುವ ಇಎಸ್‌ಐ ಆಸ್ಪತ್ರೆ ಸಮೀಪ ಆರಂಭವಾಯಿತು. ಬಿಜೆಪಿ ಮುಖಂಡ ಶಶೀಲ್‌ ನಮೋಶಿ ಅವರು ನೂತನ ಮಳಿಗೆಯನ್ನು ಉದ್ಘಾಟಿಸಿದರು.

ಉದ್ಯಮಿ ರಾಘವೇಂದ್ರ ಮೈಲಾಪುರ ಮಾತನಾಡಿ, ‘ಜಿಎಸ್‌ಎಂ’ನ ಕಟ್ಟಡ ಸಾಮಗ್ರಿಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಹೆಸರಿದೆ. ಈ ಕಂಪೆನಿಯ ಕಬ್ಬಿಣದ
ಸರಳು ಬಳಸಿ ಪ್ರತಿಷ್ಠಿತ ಕಟ್ಟಡಗಳನ್ನು ನಿರ್ಮಿಸಲಾಗಿದೆ’ ಎಂದು ತಿಳಿಸಿದರು.

ಸಂಸ್ಥೆಯ ನಿರ್ದೇಶಕ ಸುಷಿನ್‌ ಖಾನ್‌ ಮಾತನಾಡಿ, ‘ಕಂಪೆನಿಯು ಉತ್ತರ ಕರ್ನಾಟಕ ಭಾಗದಲ್ಲಿ ವಹಿವಾಟು ವಿಸ್ತರಣೆಗೆ ಮುಂದಾಗಿದೆ. ಗ್ರಾಮೀಣ ಭಾಗದ ಗ್ರಾಹಕರಿಗೆ ಉತ್ಪನ್ನಗಳನ್ನು ತಲುಪಿಸುವ ಗುರಿ ಹೊಂದಲಾಗಿದೆ’ ಎಂದು ತಿಳಿಸಿದರು.

ದಕ್ಷಿಣ ಭಾರತದ ಮುಖ್ಯಸ್ಥ ಅನೀಷ್‌ ಥಾಮಸ್‌ ಮಾತನಾಡಿ, ‘ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಇದು ನಮ್ಮ ಮೊದಲ ಮಳಿಗೆ. ಕಲಬುರ್ಗಿ, ಬೀದರ್‌ ಹಾಗೂ ಯಾದಗಿರಿಯಲ್ಲಿ ಹೆಚ್ಚು ಗ್ರಾಹಕರನ್ನು ಹೊಂದುವುದು ನಮ್ಮ ಉದ್ದೇಶ. ಸಗಟು ಹಾಗೂ ಚಿಲ್ಲರೆ ಮಾರಾಟಕ್ಕೆ ನೂತನ ಮಳಿಗೆಯಲ್ಲಿ ಅವಕಾಶ ಕಲ್ಪಿಸಲಾಗಿದೆ’ ಎಂದು ಹೇಳಿದರು.

ಕಂಪೆನಿಯ ನಿರ್ದೇಶಕರಾದ ಇಮ್ರಾನ್‌ ಖಾನ್, ಸುರೇಶ, ರಶೀದ್‌ ಖಾನ್‌, ಎಂಜಿನಿಯರ್‌ಗಳ ಸಂಸ್ಥೆಯ ಅಧ್ಯಕ್ಷ ರಾಜಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT