ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಸ್ಯ ಸಂಪತ್ತು ದೊಡ್ಡ ಆಸ್ತಿ: ಆಚಾರ್‌

Last Updated 12 ಅಕ್ಟೋಬರ್ 2017, 11:00 IST
ಅಕ್ಷರ ಗಾತ್ರ

ಕುಕನೂರು: ಸಸ್ಯ ಸಂಪತ್ತು ನಮಗೆ ದೊಡ್ಡ ಆಸ್ತಿ. ಇಂದು ನಗರೀಕರಣದ ನೆಪದಲ್ಲಿ ಅರಣ್ಯ ನಾಶವಾಗುತ್ತಿದೆ. ಇದರಿಂದ ಜಾಗತಿಕ ತಾಪಮಾನದ ಸಮಸ್ಯೆ ಉಂಟಾಗುತ್ತಿದೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಹಾಲಪ್ಪ ಆಚಾರ ಹೇಳಿದರು.

ಇಲ್ಲಿನ 2ನೇ ವಾರ್ಡಿನ ಗುದ್ನೇಶ್ವರ ದೇವಸ್ಥಾನದಲ್ಲಿ ಈಚೆಗೆ ನಡೆದ ಸಸಿನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಪಮಾನ ಏರಿಕೆಯಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಹೇಳಿದರು.

‘ಮರಗಳ ನಾಶದಿಂದಾಗಿ ನೈಸರ್ಗಿಕ ವಿಕೋಪಗಳು ಸಂಭವಿಸುತ್ತಿವೆ. ಅರಣ್ಯ ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕಾಗಿದೆ. ಮನುಕುಲದ ಒಳಿತಿಗಾಗಿ ಸಸಿ ನೆಡಬೇಕು. ಕೇವಲ ಸಸಿನೆಟ್ಟರೆ ಸಾಲದು. ಅವುಗಳ ಪೋಷಣೆ ಮಾಡಬೇಕು’ ಎಂದು ಸಲಹೆ ನೀಡಿದರು.

ಅಭಿವೃದ್ಧಿ ನೆಪದಲ್ಲಿ ಮರಗಳನ್ನು ಕಡಿಯುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಮಹದೇವ ದೇವರು, ಶರಣಪ್ಪ ಬಣ್ಣದಭಾವಿ, ಮೃಂತಜಯ್ಯ ಕಂಪ್ಲಿ, ಶಿವಕುಮಾರ ನಾಗಲಾಪೂರಮಠ, ಕರಬಸಯ್ಯ ಬಿನ್ನಾಳ, ಮಹಾಂತೇಶ ಹೂಗಾರ, ಮಂಜುನಾಥ ನಾಡಗೌಡ್ರ, ಕನಕಪ್ಪ ಬ್ಯಾಡರ್, ಬಸವರಾಜ ಅಡವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT