ಶುಕ್ರವಾರ, ಸೆಪ್ಟೆಂಬರ್ 20, 2019
28 °C

ಜಗನ್ ಆಟ ಇಂದಿನಿಂದ ಶುರು

Published:
Updated:
ಜಗನ್ ಆಟ ಇಂದಿನಿಂದ ಶುರು

‘ತಿರುಟು ಪಯಲೆ’ ತಮಿಳು ಸಿನಿಮಾದ ರಿಮೇಕ್ ಆಗಿರುವ ‘ಆಡೂ ಆಟ ಆಡೂ’ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ರಿಮೇಕ್ ಚಿತ್ರದ ನಿರ್ದೇಶನವನ್ನು ಆನಂದ ಋಗ್ವೇದಿ ಮಾಡಿದ್ದಾರೆ. ಸಿನಿಮಾ ಬಗ್ಗೆ ಮಾಹಿತಿ ನೀಡಲು ಚಿತ್ರ ತಂಡ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದಿತ್ತು.

(ವಿ. ಮನೋಹರ್)

‘ಇದು ರಿಮೇಕ್‌ ಆಗಿದ್ದರೂ, ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆ. ಮೂಲ ಸಿನಿಮಾದ ಕಥೆ ಸಿನಿಮಾ ಪ್ರೇಮಿಗಳಿಗೆ ಗೊತ್ತಿರುವ ಕಾರಣ, ಕಥೆಯನ್ನು ಹೇಳಲು ಮುಂದಾಗುವುದಿಲ್ಲ’ ಎಂದರು ಆನಂದ ಋಗ್ವೇದಿ. ಜಗನ್ ಅವರು ಇದರ ನಾಯಕ ನಟ. ಸಿನಿಮಾ ನಿರ್ಮಾಣದ ಹೊಣೆಯನ್ನೂ ಅವರೇ ಹೊತ್ತುಕೊಂಡಿದ್ದಾರೆ. ಈ ಸಿನಿಮಾಕ್ಕಾಗಿ ಮಲೇಷ್ಯಾದಲ್ಲಿ 24 ದಿನಗಳ ಚಿತ್ರೀಕರಣ ನಡೆದಿದೆಯಂತೆ. ಮೈಸೂರು, ಮೇಲುಕೋಟೆ, ಬೆಂಗಳೂರಿನಲ್ಲೂ ಕೆಲವು ಭಾಗಗಳ ಚಿತ್ರೀಕರಣ ನಡೆದಿದೆಯಂತೆ.

‘ಸಿನಿಮಾ ಬಿಡುಗಡೆ ವಿಳಂಬ ಆಗಿರುವುದಕ್ಕೆ ನಾನೇ ಕಾರಣ. ಈ ಸಿನಿಮಾದಲ್ಲಿ ಹೀರೊಯಿಸಂ ಇಲ್ಲ. ಹಳ್ಳಿಯ ಹುಡುಗನೊಬ್ಬ ನಗರಕ್ಕೆ ಬಂದು ಹಣ ಮಾಡಲು ಮುಂದಾಗುವುದು ಸಿನಿಮಾದ ಕಥಾಹಂದರ’ ಎಂದರು ಜಗನ್.

(ರಾಮನಾಥ ಋಗ್ವೇದಿ)

ಸಿನಿಮಾಕ್ಕೆ ಸಂಗೀತ ನೀಡಿದವರು ವಿ. ಮನೋಹರ್. ಸಿನಿಮಾದಲ್ಲಿ ಆರು ಹಾಡುಗಳಿವೆ.

Post Comments (+)