ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಸೊಬಗಿನಲ್ಲಿ ಅರಳಿದ ಚಾಮುಂಡೇಶ್ವರಿ ದೇಗುಲ

ಮುದಿಗೆರೆ: ದೇವಾಲಯಕ್ಕೆ ಆಧುನಿಕ ಸ್ಪರ್ಶ, ಮಹಾ ಕುಂಭಾಭಿಷೇಕ ಇಂದಿನಿಂದ
Last Updated 12 ಅಕ್ಟೋಬರ್ 2017, 11:10 IST
ಅಕ್ಷರ ಗಾತ್ರ

ಕೊಪ್ಪ: 1970ರಿಂದ ಮುದಿಗೆರೆ ಗ್ರಾಮದಲ್ಲಿ ನೆಲೆಸಿ ಭಕ್ತರ ಇಷ್ಟಾರ್ಥ ಈಡೇರಿಸುತ್ತಿರುವ ಚಾಮುಂಡೇಶ್ವರಿ ದೇವಿಯ ದೇಗುಲಕ್ಕೆಹೊಸ ರೂಪ ನೀಡಲಾಗಿದ್ದು ಲೋಕರ್ಪಣೆಗೆ ಭರದ ಸಿದ್ಧತೆ ನಡೆಯುತ್ತಿದೆ.

ಹೋಬಳಿಯ ಮುದಿಗೆರೆ ಗ್ರಾಮದ ಹೊರವಲಯದಲ್ಲಿ ಸುಂದರವಾಗಿ ನಿರ್ಮಾಣ ಮಾಡಲಾಗಿರುವ ಚಾಮುಂಡೇಶ್ವರಿ ದೇವಿಯ ನೂತನ ಶಿಲಾ ವಿಗ್ರಹ ಸ್ಥಿರ ಬಿಂಬ, ಪ್ರಾಣ ಪ್ರತಿಷ್ಠಾನ, ಮಹಾ ಕಂಭಾಭಿಷೇಕ ಕಾರ್ಯಕ್ರಮವು ಇಂದಿನಿಂದ ಎರಡು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿದೆ.

ನೂತನ ಚಾಮುಂಡೇಶ್ವರಿ ದೇಗುಲ ಭಕ್ತರ ಕಣ್ಮನ ಸೆಳೆಯುತ್ತಿದೆ. ಮುದಿಗೆರೆ ಗ್ರಾಮದಲ್ಲಿ ಪ್ರತಿವರ್ಷ ದೇವರ ಉತ್ಸವ ಮಾಡಿ ಊರ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದ್ದಾರೆ. ದೇಗುಲದ ಮುಂಭಾಗದಲ್ಲಿ ಬೇವು ಮತ್ತು ಅರಳಿ ಮರಳನ್ನು ಒಳಗೊಂಡ ಕಟ್ಟೆಯನ್ನು ಆಧುನಿಕ ಶೈಲಿಯಲ್ಲಿ ನಿರ್ಮಿಸಿದ್ದು ದೇಗುಲಕ್ಕೆ ಮೆರುಗು ತಂದಿದೆ.

ಕಾರ್ಯಕ್ರಮಗಳ ವಿವಿರ: ಅ.12 ರ ಸಂಜೆ 6 ಗಂಟೆಗೆ ದೇಗುದಲ್ಲಿ ಗಂಗೆ, ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹವಾಚನ, ಪಂಚಗವ್ಯ ಮೇಳ, ಅಂಕುರಾರ್ಪಣೆ, ಧ್ವಜಾರೋಹಣ, ಮೃತ್ತಿಕಾ ಸಂಗ್ರಹಣಾ, ರಕ್ಞಾ ಬಂಧನ, ಕಳಶ ಪೂಜೆ, ಯಾಗ ಶಾಲಾ ಪ್ರವೇಶ, ಅಗ್ನಿ ಪ್ರತಿಷ್ಠಾಪನೆ ಸೇರಿ ಇತರ ಪೂಜಾ ಕೈಂಕರ್ಯಗಳು ವಿಜೃಂಭಣೆಯಿಂದ ಜರುಗಲಿವೆ.

ಅ.13 ಬೆಳಿಗ್ಗೆ ಅಮ್ಮನವರಿಗೆ ಪ್ರಾಣ ಪ್ರತಿಷ್ಠಾಪನೆ, ದುರ್ಗಾ, ನವಶಕ್ತಿ, ಗೋ ಪೂಜೆಗಳು ಸೇರಿದಂತೆ ಹಲವು ಬಗೆಯ ಹೋಮ ಹವನ ನಡೆಯಲಿವೆ. ದೇಗುಲಕ್ಕೆ ಮತ್ತು ದೇವಿಯ ವಿಗ್ರಹಕ್ಕೆ ವಿಶೇಷ ಹೂವಿನ ಅಲಂಕಾರ ಮಾಡು ಜೊತೆಗೆ ಹಲವು ಬಗೆಯ ಅಭಿಷೇಕ ನೇರವೆರಿಸಲಾಗುವುದು. ಮಧ್ಯಾಹ್ನ 12 ಗಂಟೆಗೆ ದೇಗುಲದ ಆವರಣದಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಧರ್ಮಸ್ಥಳ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆಯ ಅವರ ಆಶಿರ್ವಾದಗಳೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಕಾರ್ಯಕ್ರಮದಲ್ಲಿ ವಸತಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ. ಕೃಷ್ಣಪ್ಪ, ಸಂಸದ ಸಿ.ಎಸ್‌. ಪುಟ್ಟರಾಜು, ಶಾಸಕರಾದ ಡಿ.ಸಿ. ತಮ್ಮಣ್ಣ, ಕೆ.ಟಿ. ಶ್ರೀಕಂಠೇಗೌಡ, ಎನ್‌. ಅಪ್ಪಾಜಿಗೌಡ, ಗೋಪಾಲಯ್ಯ, ಪ್ರಿಯಾಕೃಷ್ಣ, ಜಿ.ಪಂ. ಸದಸ್ಯ ಎಂ. ಮರಿಹೆಗಡೆ ಸೇರಿ ಇತರರು ಭಾಗವಹಿಸಲಿದ್ದಾರೆ.
‘7 ದಶಕಗಳಿಂದ ದೇವರ ಉತ್ಸವವನ್ನು ಮಾಡಲಾಗುತ್ತಿದ್ದು ಗ್ರಾಮಸ್ಥರ ಮತ್ತು ಕೆಲ ಜನ ಪ್ರತಿನಿಧಿಗಳ ನೆರವಿನೊಂದಿಗೆ ನೂತನ ದೇಗುಲವನ್ನು ನಿರ್ಮಾಣ ಮಾಡಲಾಗಿದೆ. ಗ್ರಾಮಾಭ್ಯುದಯಕ್ಕೆ ಚಾಮುಂಡೇಶ್ವರಿ ದೇವಿಯ ಆಶೀರ್ವಾದವಿದೆ’ ಎನ್ನುತ್ತಾರೆ ಗ್ರಾಮದ ಹಿರಿಯ ಮುಖಂಡ ಶೇಖರಪ್ಪ.

ಭಕ್ತಾಧಿಗಳು ಮತ್ತು ಅಕ್ಕಪಕ್ಕದ ಗ್ರಾಮಸ್ಥರು ದೇವರ ಕಾರ್ಯದಲ್ಲಿ ಪಾಲ್ಗೋಂಡು ದೇವರ ಕೃಪೆಗೆ ಪಾತ್ರರಾಗಬೇಕು. ದೇಗುಲದ ಹೆಚ್ಚಿನ ಅಭಿವೃದ್ದಿಗೆ ಭಕ್ತರು ನೇರವಾಗಬೇಕು ಎಂದು ಮುದಿಗೆರೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT