ಶುಕ್ರವಾರ, ಸೆಪ್ಟೆಂಬರ್ 20, 2019
22 °C

ಒಂದೇ ಚಿತ್ರದಲ್ಲಿ ಮಾವ–ಸೊಸೆ!

Published:
Updated:
ಒಂದೇ ಚಿತ್ರದಲ್ಲಿ ಮಾವ–ಸೊಸೆ!

ಇತ್ತೀಚೆಗಷ್ಟೇ ನಟ ನಾಗಚೈತನ್ಯ ಜೊತೆ ಹಸೆಮಣೆಯೇರಿದ ನಟಿ ಸಮಂತಾ ರುತ್ ಪ್ರಭು ತಮ್ಮ ಮುಂದಿನ ಚಿತ್ರ ‘ರಾಜುಗಾರಿ ಗದಿ–2’ರಲ್ಲಿ ಮಾವ ನಾಗಾರ್ಜುನ ಎದುರು ಅಭಿನಯಿಸಿದ್ದಾರೆ.

ಮದುವೆ ಮುನ್ನವೇ ನಾಗಾರ್ಜುನ ಸೊಸೆ ಸಮಂತಾಳ ಪರ ವಕಾಲತ್ತು ವಹಿಸಿ  'ರಾಜುಗಾರಿ ಗದಿ–2’ ಸಿನಿಮಾಕ್ಕೆ ಅವಕಾಶ ಕೊಡಿಸಿದ್ದರಂತೆ ಎಂಬುದು ಸುದ್ದಿಯಾಗಿತ್ತು. ಆದರೆ, ಅದನ್ನು ಅಲ್ಲಗಳೆದಿದ್ದ ಸಮಂತಾ ಸ್ವಂತ ಸಾಮರ್ಥ್ಯದಿಂದ ಅಭಿನಯದ ಅವಕಾಶ ಪಡೆದಿದ್ದಾಗಿ ಸ್ಪಷ್ಟನೆ ನೀಡಿದ್ದರು.

ಕಾಮಿಡಿ ಹಾರರ್ ಸಿನಿಮಾವಾಗಿರುವ ‘ರಾಜುಗಾರಿ ಗದಿ–2’ಯಲ್ಲಿ ನಾಗಾರ್ಜುನ ರುದ್ರ ಎನ್ನುವ ಮನೋವೈದ್ಯನ ಪಾತ್ರ ನಿರ್ವಹಿಸಿದ್ದರೆ ಸಮಂತಾ ದೆವ್ವವಾಗಿ ಪ್ರೇಕ್ಷಕರನ್ನು ರಂಜಿಸಲಿದ್ದಾರಂತೆ. ಚಿತ್ರದ ಮತ್ತೊಂದು ಪಾತ್ರದಲ್ಲಿ ಸಮಂತಾ ವಕೀಲೆಯಾಗಿಯೂ ಕಾಣಿಸಿಕೊಂಡಿರುವುದು ವಿಶೇಷ.

ಈಚೆಗೆ ವಕೀಲರ ಕರಿಕೋಟು ತೊಟ್ಟ ಸಮಂತಾಳ ಫೋಟೊಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸಿನಿಮಾದ ಟ್ರೇಲರ್ ಕೂಡಾ ಬಿಡುಗಡೆಯಾಗಿದ್ದು, ವೀಕ್ಷಕರಲ್ಲಿ ಕುತೂಹಲ ಹುಟ್ಟುಹಾಕಿದೆ. ಮದುವೆಯ ನಂತರ ಬಿಡುಗಡೆಯಾಗುತ್ತಿರುವ ಚಿತ್ರದ ಬಗ್ಗೆ ಮಾವ ನಾಗಾರ್ಜುನ ಮತ್ತು ಸೊಸೆ ಸಮಂತಾ ಕಾತುರರಾಗಿದ್ದಾರಂತೆ.

Post Comments (+)