ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ ನಿರ್ವಹಣಾ ಯೋಜನೆ ಜಾರಿಗೆ ಸಿದ್ಧತೆ

Last Updated 12 ಅಕ್ಟೋಬರ್ 2017, 11:47 IST
ಅಕ್ಷರ ಗಾತ್ರ

ಬೈಂದೂರು: 1991ರ ಕರಾವಳಿ ನಿಯಂತ್ರಣಾ ವಲಯ (ಸಿಆರ್‌ಝಡ್) ಅಧಿಸೂಚನೆ ಅನ್ವಯ 1996ರಲ್ಲಿ ರಚಿಸಿದ್ದ ಕರಾವಳಿ ವಲಯ ನಿರ್ವಹಣಾ ಯೋಜನೆಯ (ಸಿಝಡ್‌ಎಂಪಿ) ಸ್ಥಾನದಲ್ಲಿ 2011ರ ತಿದ್ದುಪಡಿಗೆ ಅನುಗುಣವಾಗಿ ನೂತನ ಯೋಜನೆಯ ಕರಡು ಸಿದ್ಧವಾಗಿದ್ದು ಅದರಿಂದ ಬಾಧಿತರಾಗುವವರಿಂದ ಮತ್ತು ಸಾರ್ವಜನಿಕರಿಂದ ಸಲಹೆ, ಆಕ್ಷೇಪಣೆ ಕರೆಯಲಾಗಿದೆ.

ಪ್ರತಿ ಗ್ರಾಮಕ್ಕೆ ಸಂಬಂಧಿಸಿದ ಕರಡು ಯೋಜನೆ ಮತ್ತು ಸಂಬಂಧಿತ ದಾಖಲೆಗಳು ಜಿಲ್ಲಾಧಿಕಾರಿ, ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯಿತಿ, ಅರಣ್ಯ ಪರಿಸರ ಜೀವಿಶಾಸ್ತ್ರ ಇಲಾಖೆಯ ಪ್ರಾದೇಶಿಕ ನಿರ್ದೇಶಕರ, ತಹಶೀಲ್ದಾರರ ಕಚೇರಿಗಳಲ್ಲಿ, ಇಲಾಖೆಯ ಜಾಲತಾಣದಲ್ಲಿ ಲಭ್ಯ ಇವೆ.

ಆಕ್ಷೇಪಣೆ, ಸಲಹೆಗಳನ್ನು ಬೆಂಗಳೂರಿನ ಕರ್ನಾಟಕ ಕಡಲತೀರ ವಲಯ ನಿರ್ವಹಣಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಅರಣ್ಯ ಪರಿಸರ ಜೀವಿಶಾಸ್ತ್ರ ಇಲಾಖೆ, ಕೊಠಡಿ ಸಂಖ್ಯೆ 710, 7ನೇ ಮಹಡಿ, 4ನೇ ದ್ವಾರ, ಬಹುಮಹಡಿ ಕಟ್ಟಡ, ಬೆಂಗಳೂರು–560001 ಅವರಿಗೆ ನವಂಬರ್ 7ರೊಳಗೆ ಕಳುಹಿಸಬಹುದು. ಅವು ಕರಡು ಯೋಜನೆ ಕುರಿತಾಗಿರಬೇಕೇ ಹೊರತು ಅಧಿಸೂಚನೆಯ ಬಗೆಗೆ ಅಲ್ಲ.

ಯೋಜನೆಯಲ್ಲಿ ಏನಿದೆ?: ಈ ಯೋಜನೆಯು ನಿಯಂತ್ರಣಕ್ಕೆ ಒಳಪಡುವ ಗ್ರಾಮಗಳ ನಕ್ಷೆಯ ರೂಪದಲ್ಲಿದೆ.

ನಕ್ಷೆಯ ಮೇಲೆ ಸಮುದ್ರದ ಉಬ್ಬರ ರೇಖೆ ಮತ್ತು ಸಿಆರ್‌ಝಡ್ 1, 2, 3, 4ರ ಗಡಿರೇಖೆಗಳನ್ನು ಗುರುತಿಸಿ ಅವುಗಳ ವ್ಯಾಪ್ತಿಯ ಸರ್ವೇ ನಂಬರುಗಳನ್ನು ನೀಡಲಾಗಿದೆ. ಈ ವಲಯಗಳಲ್ಲಿ ಕೆಲವು ಚಟುವಟಿಕೆಗಳಿಗೆ ಅವಕಾಶವಿದೆ ಮತ್ತು ಕೆಲವಕ್ಕೆ ಇಲ್ಲ. (ಸ್ಥೂಲ ಮಾಹಿತಿಗೆ ಬಾಕ್ಸ್ ನೋಡಿ).

ಯೋಜನೆಯಲ್ಲಿ ಸ್ಥಳಗಳನ್ನು ವಲಯಗಳಡಿ ಗುರುತಿಸುವಾಗ ಮತ್ತು 2011ರ ಅಧಿಸೂಚನೆಯ ಅವಕಾಶಗಳನ್ನು ಅನ್ವಯಿಸುವಾಗ ತಪ್ಪುಗಳಾಗಿದ್ದರೆ, ವಸತಿ ಮತ್ತು ಪ್ರವಾಸೋದ್ಯಮ ವಿಶೇಷ ವಲಯಕ್ಕೆ ಅವಕಾಶವಿದ್ದು ಅದನ್ನು ಮಾಡಿರದಿದ್ದರೆ ಆಕ್ಷೇಪಣೆ ಮತ್ತು ಸಲಹೆಗಳನ್ನು ಕೊಡಬಹುದು.

ರಾಜ್ಯ ಪ್ರಾಧಿಕಾರವು ಯೋಜನೆಯನ್ನು ಅಂತಿಮಗೊಳಿಸುವ ಮುನ್ನ ಅವುಗಳನ್ನು ಪರಿಗಣಿಸಲಿದೆ.
ಈ ಕುರಿತು ಮಾಹಿತಿ ನೀಡುವ ಕೆಲಸವನ್ನು ಗ್ರಾಮ ಪಂಚಾಯಿತಿಗಳು ಮತ್ತು ಇಲಾಖೆ ಅಲ್ಲಲ್ಲಿ ನಡೆಸುತ್ತಿವೆ.

ಸಾರ್ವಜನಿಕರು ಅದರ ಪ್ರಯೋಜನ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT