ದೂರವೇ ಇರಿ

ಶುಕ್ರವಾರ, ಮೇ 24, 2019
30 °C

ದೂರವೇ ಇರಿ

Published:
Updated:
ದೂರವೇ ಇರಿ

ವಾಸ್ತುಶಾಸ್ತ್ರದ ಪ್ರಕಾರ ಕೆಲವು ಚಿತ್ರ, ವಸ್ತುಗಳು ಮನೆಯಲ್ಲಿರುವುದರಿಂದ ಸಂಬಂಧಗಳು ಕೆಡುತ್ತವೆ. ಇಂತಹ ವಸ್ತುಗಳನ್ನು ಮನೆಗೆ ತರುವುದರಿಂದ ಮನಸ್ಸಿಗೆ ಕಿರಿಕಿರಿ ಆಗುತ್ತಿರುತ್ತದೆ. ಇಂಥ ವಸ್ತುಗಳನ್ನು ಮನೆಯಲ್ಲಿ ಇಡದಿರುವುದು ಒಳಿತು. ಮುಳುಗುವ ದೋಣಿಯ ಚಿತ್ರ ಮನೆಯಲ್ಲಿದ್ದರೆ ಮನೆಯವರ ನಡುವೆ ಸಂಬಂಧ ಹಾಳಾಗುತ್ತದೆ ಎಂಬ ನಂಬಿಕೆಯಿದೆ.

ನೀರಿನ ಕಾರಂಜಿ ಮನೆಯಲ್ಲಿದ್ದರೆ ಮನೆ ಸೌಂದರ್ಯ ಹೆಚ್ಚುವುದು, ಆದರೆ ವಾಸ್ತುಶಾಸ್ತ್ರದ ಪ್ರಕಾರ ಇದು ಮನೆಯಲ್ಲಿದ್ದರೆ ಹಣ, ಐಶ್ವರ್ಯ ಕೈಯಲ್ಲಿ ನಿಲ್ಲುವುದಿಲ್ಲ.

ಕಾಡು ಪ್ರಾಣಿಗಳ ಚರ್ಮ, ಕೊಂಬು ಅಥವಾ ಚಿತ್ರವನ್ನು ಮನೆಯಲ್ಲಿ ಇಡಬಾರದು,ಇವುಗಳು ಮನೆಯಲ್ಲಿದ್ದರೆ ಅಲ್ಲಿ ವಾಸಿಸುವ ಮನುಷ್ಯರು ಸಹ ಕ್ರೂರ ಸ್ವಭಾವದವರಾಗುತ್ತಾರೆ ಎಂಬ ನಂಬಿಕೆ ಇದೆ.

ಯುದ್ಧಕ್ಕೆ ಸಂಬಂಧಿಸಿದ ಯಾವುದೇ ಚಿತ್ರಗಳನ್ನು ಮನೆಯಲ್ಲಿ ಇರಿಸುವುದು ಒಳ್ಳೆಯದಲ್ಲ. ಹಾಗೆಯೇ ತಾಜ್‌ಮಹಲ್‌ ಚಿತ್ರವೂ ಮನೆಯಲ್ಲಿ ಇರುವುದು ಒಳ್ಳೆಯದಲ್ಲ ಎನ್ನಲಾಗುತ್ತದೆ.

ಒಣಗಿದ ಗಿಡಗಳನ್ನು ಮನೆಯಲ್ಲಿ ಇಡುವುದು ಒಳ್ಳೆಯದಲ್ಲ. ಇದರಿಂದ ಮನೆಮಂದಿಯ ಮನಸು ಕಳೆಗಟ್ಟುವುದಿಲ್ಲ. ಮನೆಮಂದಿಗೆ ಅದೃಷ್ಟ ಒಲಿಯುವುದಿಲ್ಲ.

ಅಲಂಕಾರದ ಉದ್ದೇಶದಿಂದ ಕೆಲವರು ಮನೆಯೊಳಗೆ ಕಳ್ಳಿ ಗಿಡಗಳನ್ನು ಇಟ್ಟುಕೊಳ್ಳುತ್ತಾರೆ. ಆದರೆ ಇದು ಮನೆಯೊಳೆಗೆ ನಕಾರಾತ್ಮಕ ಶಕ್ತಿ ಬರುವಂತೆ ಮಾಡುತ್ತದೆ. ಹಾಗಾಗಿ ಮನೆಯಲ್ಲಿ ಇರಿಸಲೇಬಾರದು ಎನ್ನಲಾಗುತ್ತದೆ.

ಒಡೆದ ಗಾಜು, ಕನ್ನಡಿಗಳನ್ನು ಮನೆಯಲ್ಲಿ ಇರಿಸುವುದರಿಂದ ಮನೆಮಂದಿಯ ನಡುವೆ ಇರಿಸುಮುರಿಸು ಉಂಟಾಗುತ್ತದೆ. ಯಾರ ಮನಸಿನಲ್ಲಿಯೂ ನೆಮ್ಮದಿ ಇರುವುದಿಲ್ಲ. (ಮಾಹಿತಿ www.khoobsurati.com)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry