ತಿಪ್ಪೇಸ್ವಾಮಿಗೆ ‘ವಯೋಶ್ರೇಷ್ಠ ಸಮ್ಮಾನ್’

ಭಾನುವಾರ, ಮೇ 26, 2019
33 °C

ತಿಪ್ಪೇಸ್ವಾಮಿಗೆ ‘ವಯೋಶ್ರೇಷ್ಠ ಸಮ್ಮಾನ್’

Published:
Updated:
ತಿಪ್ಪೇಸ್ವಾಮಿಗೆ ‘ವಯೋಶ್ರೇಷ್ಠ ಸಮ್ಮಾನ್’

ಮೈಸೂರು: ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ವತಿಯಿಂದ ನೀಡಲಾಗುವ ‘ವಯೋಶ್ರೇಷ್ಠ ಸಮ್ಮಾನ್’ ಪ್ರಶಸ್ತಿಯನ್ನು ನಗರದ ವನ್ಯಜೀವಿ ಛಾಯಾಗ್ರಾಹಕ ಎಸ್.ತಿಪ್ಪೇಸ್ವಾಮಿ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಈಚೆಗೆ  ನವದೆಹಲಿಯಲ್ಲಿ ಪ್ರದಾನ ಮಾಡಿದರು.‌

ಸೃಜನಶೀಲ ಕಲೆ ಮತ್ತು ವನ್ಯಜೀವಿ ಛಾಯಾಗ್ರಹಣ ಕ್ಷೇತ್ರದಲ್ಲಿ ತಿಪ್ಪೇಸ್ವಾಮಿ ಅವರ ಜೀವಮಾನ ಸಾಧನೆ ಪರಿಗಣಿಸಿ ಅವರನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ₹ 2.5 ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry